ನೆಲ, ಜಲ, ಭಾಷೆ ರಕ್ಷಣೆಗೆ ಬದ್ಧ: ಯಡಿಯೂರಪ್ಪ

64 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಮಾಣಿಕ್ ಷಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಭರವಸೆ ಮತ್ತು ಯೋಜನೆಗಳನ್ನು ಪ್ರಕಟಿಸಿದರು.
ಸಿಎಂ ಭಾಷಣದ ಮುಖ್ಯಾಂಶಗಳು:
* ಬೆಂಗಳೂರು ಮೂಲಸೌಕರ್ಯಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 18,872 ಕೋಟಿ ರುಪಾಯಿ ಅಭಿವೃದ್ಧಿ ಯೋಜನೆ.
* 200 ಕೋಟಿ ರುಪಾಯಿ ವೆಚ್ಚದಲ್ಲಿ ಬೆಂಗಳೂರಿನಲ್ಲಿರುವ 25 ಕೆರೆಗಳ ಅಭಿವೃದ್ಧಿ.
* ಗುಡಿಸಲು ನಿವಾಸಿಗಳಿಗೆ ಬಸವ ಇಂದಿರಾ ಆವಾಸ ವಸತಿ ಯೋಜನೆ.
* ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ.
* ರೈತರಿಗೆ 7 ಸಾವಿರ ಕೋಟಿ ರುಪಾಯಿ ಸಾಲ.
* ಸಾವಯುವ ಕೃಷಿಗೆ ಮುಂದಿನ ವರ್ಷ 200 ಕೋಟಿ ರುಪಾಯಿ.
* ಸ್ವಾತಂತ್ರ್ಯ ಹೋರಾಟಗಾರರ ಗೌರವಧನ 4 ಸಾವಿರ ರುಪಾಯಿಗೆ ಹೆಚ್ಚಳ.
* ಡಿಸೆಂಬರ್ ನಲ್ಲಿ ಬೆಳಗಾವಿಯ ನೂತನ ಸುವರ್ಣಸೌಧದಲ್ಲಿ ವಿಧಾನಮಂಡಲ ಅಧಿವೇಶನ.
* ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸ್ಮಾರಕ ಅಭಿವೃದ್ದಿಗೆ ಕ್ರಮ.
* ಶಿವಪುರ, ಹುದಲಿ, ಶಿಕಾರಿಪುರ ಆಲಮಟ್ಟಿ ಸ್ವಾತಂತ್ರ್ಯ ಸಂಗ್ರಾಮದ ನೆಲೆ ಅಭಿವೃದ್ಧಿಗೆ ಕ್ರಮ.
* ಉದ್ಯೋಗ ಸೃಷ್ಟಿಗೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ.
* ಪಶು ಸಂಗೋಪನೆ ಅಭಿವೃದ್ಧಿಗೆ ಹೊಸ ನೀತಿ.
* 14 ನೀರಾವರಿ ಯೋಜನೆ ಪೂರ್ಣ, 70 ಸಾವಿರ ಎಕರೆಗೆ ನೀರು ಪೂರೈಕೆ.
* ಹಿಂದುಳಿದ 114 ತಾಲ್ಲೂಕುಗಳ ಅಭಿವೃದ್ಧಿಗೆ ಒತ್ತು.
* 300 ಕೋಟಿ ರುಪಾಯಿ ವೆಚ್ಚದಲ್ಲಿ ಈ ವರ್ಷ 100 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ.
* ಮೂಲಸೌಕರ್ಯ ಒದಗಿಸಲು ಮಹಾನಗರ ಪಾಲಿಕೆಗೆ 100 ಕೋಟಿ ರು.
* ಜಿಲ್ಲಾ ಕೇಂದ್ರಗಳಿಗೆ 30 ಕೋಟಿ ರುಪಾಯಿ, ತಾಲ್ಲೂಕು ಕೇಂದ್ರಗಳಿಗೆ 15 ಕೋಟಿ ರುಪಾಯಿ ನೀಡಿಕೆ.











Click it and Unblock the Notifications