ಸನ್ನಡತೆಯ ಜೈಲು ಹಕ್ಕಿಗಳ ಪರ ನಿಂತ ಮುತಾಲಿಕ್

ನಗರದ ಜಿಲ್ಲಾ ಉಪ ಕಾರಾಗೃಹದ ಮುಂದೆ ಇಂದು ನೂರಾರು ಬೆಂಬಲಿಗರೊಂದಿಗೆ ಜಮಾಯಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ರಾಜ್ಯದ ವಿವಿಧ ಕಾರಾಗೃಹದಲ್ಲಿ ಸನ್ನಡತೆವುಳ್ಳ 580ಕ್ಕೂ ಹೆಚ್ಚು ಖೈದಿಗಳಿದ್ದಾರೆ. ಇವರನ್ನು ಬಿಜೆಪಿ ಸರ್ಕಾರ ಸ್ವಾತಂತ್ರೋತ್ಸವ ದಿನದಂದು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮ ರಾಜ್ಯದಲ್ಲಿ 7 ವರ್ಷದ ಕಾರಾಗೃಹವಾಸ ಅನುಭವಿಸಿದ 948 ಖೈದಿಗಳಿದ್ದಾರೆ. ಕೇರಳ, ಆಂಧ್ರ, ತಮಿಳುನಾಡಿನಲ್ಲಿ 7 ವರ್ಷಕ್ಕೂ ಮೇಲ್ಪಟ್ಟ ಅವಧಿಯ ಶಿಕ್ಷೆ ಅನುಭವಿಸಿದವರಿಗೆ ಬಿಡುಗಡೆ ಭಾಗ್ಯ ಪ್ರಾಪ್ತಿಯಾಗಿದೆ.
ಕರ್ನಾಟಕದಲ್ಲಿ ಈ ಹಿಂದಿನ ಸರ್ಕಾರಗಳು ಉತ್ತಮ ನಡತೆ ಹೊಂದಿದ ಖೈದಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸಿದ ಉದಾಹರಣೆಗಳಿವೆ. ಆದ್ದರಿಂದ, ಬಿಜೆಪಿ ಸರ್ಕಾರ ಕೂಡಾ, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಜೈಲ್ ಸೂಪರ್ ಇಂಟೆಂಡೆಂಟ್ ಗೆ ಮನವಿ ಸಲ್ಲಿಸಿದರು.












Click it and Unblock the Notifications