ಗರ್ಭಿಣಿಯರಿಗೆ ಪ್ರತ್ಯೇಕ ಕಾಲೇಜು!

Malaysian Motherhood
ಕೌಲಾಲಂಪುರ, ಜು.30: ಮದುವೆ ಆದ ಮೇಲೆ ಓದಿಗೆ ಬ್ರೇಕ್ ಹಾಕಿ ಮನೆಯಲ್ಲೇ ಕೂತು ಕೊರಗುವ ಮಹಿಳೆಯರಿಗೆ ಇಲ್ಲಿನ ರಾಜ್ಯವೊಂದು ಹೊಸ ಯೋಜನೆ ಪ್ರಕಟಿಸಿದೆ. ವಿವಾಹಿತ ಗರ್ಭಿಣಿ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಆರಂಭಿಸುವುದಾಗಿ ಘೋಷಿಸಲಾಗಿದೆ.

ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ಕಂಡು ಬರುವ ಮಲೇಷಿಯಾದ ಮಲೇಕಾ ರಾಜ್ಯ, ಗರ್ಭಿಣಿಯರ ಸಂಕಷ್ಟವನ್ನು ಪರಿಹರಿಸಲು ಮುಂದಾಗಿದೆ. ಮಲೇಕಾ ಇಸ್ಲಾಮಿಕ್ ರಿಲೀಜಿಯಸ್ ಅಫೈರ್ಸ್ ಕೌನ್ಸಿಲ್ ನ ಸಲಹೆಯಂತೆ ಮಲೇಕಾದ ಸಿಎಂ ಮಹಮದ್ ಅಲಿ ರುಸ್ತುಂ ಈ ವಿಷಯವನ್ನು ಪ್ರಕಟಿಸಿದ್ದಾರೆ.

ಸರಿಯಾದ ಸಮಯಕ್ಕೆ ಯುವತಿಯರು ಮದುವೆಯಾಗಲಿ, ಶಿಕ್ಷಣದ ಹೆಸರಿನಲ್ಲಿ ಮದುವೆಯನ್ನು ಮುಂದೂಡುವುದು ಬೇಡ. ಇಲ್ಲಿ ಗರ್ಭಿಣಿಯರಿಗೆ ಮಾತ್ರ ಅವಕಾಶ ಎಂದು ರುಸ್ತುಂ ಹೇಳಿದರು. ಮದುವೆಯಾಗದ ತರುಣಿಯರು ಈ ಕಾಲೇಜಿಗೆ ಪ್ರವೇಶ ಬಯಸಿದರೆ ಅದಕ್ಕೂ ಅವಕಾಶವಿದೆ. ಅವರು ಈಗಾಗಲೇ ಮಕ್ಕಳುಳ್ಳ ಪುರುಷನನ್ನು ವರಿಸಿ ನಂತರ ಕಾಲೇಜಿಗೆ ಪ್ರವೇಶ ಪಡೆಯಬಹುದು.

ಅಪಾಪ್ರ ವಯಸ್ಸಿನಲ್ಲಿ ಮದುವೆಯಾದ ಮುಸ್ಲಿಂ ತರುಣಿಯರು ಗರ್ಭಪಾತ(ಇಸ್ಲಾಂನಲ್ಲಿ ಇದು ನಿಷಿದ್ಧ) ಮಾಡಿಸಿಕೊಳ್ಳದೇ, ಹುಟ್ಟುವ ಮಕ್ಕಳನ್ನು ಸಾಕಲಾಗದೇ ಅನಾಥರನ್ನಾಗಿಸುತ್ತಿರುವುದು ಮಲೇಷಿಯಾದಲ್ಲಿ ದೊಡ್ಡ ಸಮಸ್ಯೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+