ಕೊಹಿನೂರು ವಜ್ರ ವಾಪಸ್ ಮಾಡಲ್ಲ: ಬ್ರಿಟನ್

ಬೆಂಗಳೂರು, ಜು.30: ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಅಂತಾರಾಷ್ಟ್ರೀಯ ಜಾಲವೊಂದರ ಮೂಲಕ ಭಾರತದ ಆಸ್ತಿಯಾದ ಕೊಹಿನೂರು ವಜ್ರ ಪಡೆಯಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ. ಭಾರತ ಪ್ರವಾಸದಲ್ಲಿರುವ ಡೇವಿಡ್ ಕೆಮರೂನ್, ವಜ್ರ ಬ್ರಿಟಿಷ್ ಮ್ಯೂಸಿಯಂನಲ್ಲಿ ಭದ್ರವಾಗಿರಲಿದೆ ಎಂದು ಹೇಳಿದ್ದಾರೆ.

ಬ್ರಿಟಿಷ್ ಮ್ಯೂಸಿಯಂನ ಅಮೂಲ್ಯ ವಸ್ತುವಾದ ಕೊಹಿನೂರು ವಜ್ರವನ್ನು ಅಲ್ಲಿಂದ ತೆಗೆದರೆ, ಪ್ರೇಕ್ಷಕರಿಗೆ ಗ್ಯಾಲರಿ ಖಾಲಿ ಖಾಲಿ ಎನಿಸಲಿದೆ. ಅದು ನಮಗೂ ಮಹತ್ವದ ವಸ್ತುವಾಗಿದೆ ಎಂದು ಭಾರತ ಮೂಲದ ಬ್ರಿಟನ್ ಸಂಸತ್ ಸದಸ್ಯ ಕೀತ್ ವಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಸುಮಾರು 105 ಕ್ಯಾರೆಟ್ ನ ಕೊಹಿನೂರು ವಜ್ರ, ಪ್ರಪಂಚದ ದೊಡ್ಡ ವಜ್ರಗಳಲ್ಲಿ ಒಂದಾಗಿದೆ. ಆಂಧ್ರಪ್ರದೇಶದ ಗುಂಟೂರು ಇದರ ಮೂಲ ಎನ್ನಲಾಗಿದ್ದು, ಹಿಂದೂ ರಾಜರು, ಮೊಘಲರು, ಪರ್ಷಿಯನ್ನರು, ಅಫ್ಘನ್ನರು, ಸಿಖ್ಖರು ಹಾಗೂ ಬ್ರಿಟಿಷ್ ಅಧಿಕಾರಿಗಳು ಈ ವಜ್ರಕ್ಕಾಗಿ ಸಮರ ಸಾರಿದ್ದರು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಕೊನೆಗೆ ಈಸ್ಟ್ ಇಂಡಿಯಾ ಕಂಪೆನಿಯ ಮೂಲಕ ರಾಣಿ ವಿಕ್ಟೋರಿಯಾ ಆಳ್ವಿಕೆ ಕಾಲದಲ್ಲಿ ಬ್ರಿಟಿಷರ ಕೈ ಸೇರಿತು.

ಯುನೆಸ್ಕೋ ನೆರವಿನೊಂದಿಗೆ ಭಾರತೀಯ ಪುರಾತತ್ವ ಇಲಾಖೆ(ASI) ಕೊಹಿನೂರು ವಜ್ರವನ್ನು ಭಾರತಕ್ಕೆ ತರಲು ಇನ್ನಿಲ್ಲದ್ದಂತೆ ಪ್ರಯತ್ನ ನಡೆಸಿ ವಿಫಲವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+