ಶ್ರೀಗಳ ಸಮ್ಮುಖದಲ್ಲಿ ಕುಸ್ತಿ ಹಿಡಿದ ಶಿಷ್ಯ ಪಡೆ
ಹುಬ್ಬಳ್ಳಿ,
ಜು. 21 : ಮಾದ್ವ ಸಮುದಾಯದ ಆರಾಧ್ಯ ಪೀಠ ಗುರು ರಾಘವೇಂದ್ರಸ್ವಾಮಿ ಮಠದ ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಸಂಬಂಧ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಆಂತರಿಕ ಜಗಳ ಕೊನೆಗೂ ಮಂತ್ರಾಲಯ ಶ್ರೀಗಳ ಸಮ್ಮುಖದಲ್ಲೇ ಸ್ಫೋಟಗೊಂಡಿದೆ. id="toptextpromo">ಇಲ್ಲಿನ
ಭವಾನಿ ನಗರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಸೋಮವಾರ ರಾತ್ರಿ 12.30ಕ್ಕೆ ಆರಂಭವಾದ ಸುಶಮೀಂದ್ರ ತೀರ್ಥರ ಗುರುವಂದನಾ ಕಾರ್ಯಕ್ರಮದಲ್ಲಿ ಸುಯತೀಂದ್ರ ಶ್ರೀಗಳು ಎದುರು ತುಂಬಿದ ಸಭೆಯಲ್ಲೇ ಭಕ್ತರು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಶ್ರೀಗಳು ಹೆಚ್ಚುವರಿ ಕಾರ್ಯದರ್ಶಿ ಸುಯಮೀಂದ್ರ ಆಚಾರ್ಯರು ಕುಸಿದು ಬಿದ್ದಿದ್ದೂ ಆಯಿತು. ಈ ಮೂಲಕ ಮಂತ್ರಾಲಯ ಮತ್ತು ಬೆಂಗಳೂರು ಮಠದಲ್ಲಿ ಹೊಗೆಯಾಡುತ್ತಿದ್ದ ಆಂತರಿಕ ಕಚ್ಟಾಟ ತೀವ್ರ ಸ್ವರೂಪ ಪಡೆದುಕೊಂಡಂತಾಗಿದೆ. id='are-slot-1' class='oiad oi-axt oiadv'> id='top-searched-articles'>ಹಾಲಿ
ಪೀಠಾಧೀಶ ಸುಯತೀಂದ್ರ ತೀರ್ಥರ ಆಪ್ತಸಹಾಯಕ ಸಿಬ್ಬಂದಿಯಾಗಿರುವ ಹಾಗೂ ಮಠದ ಆಡಳಿತದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ದ್ವಾರಪಾಲಕ ಆನಂದರಾವ್ ಅವರನ್ನು ವಜಾಗೊಳಿಸಬೇಕು ಎನ್ನುವುದು ಭಕ್ತರ, ಸಿಬ್ಬಂದಿಗಳ ಬೇಡಿಕೆಯಾಗಿದೆ. ಆನಂದರಾವ್ ಅವರ ವಜಾಕ್ಕೆ ಆಗ್ರಹಿಸಿ ರವಿ ಆಚಾರ್ಯ ಹುಲಗಿ, ರಮೇಶ್ ಆಚಾರ್ಯ, ಸಂಜೀವ ಆಚಾರ್ಯ ಸೇರಿದಂತೆ ಹಲವರು ಸಭೆಯಲ್ಲಿ ಏರುದನಿಯಲ್ಲಿ ಆಗ್ರಹಿಸಿದರು.











Click it and Unblock the Notifications