ಭಾರತೀಯ ರುಪಾಯಿ ಚಿಹ್ನೆ ಡೌನ್ ಲೌಡ್ ಮಾಡಿಕೊಳ್ಳಿ

Download Indian Rupee Symbol
ಮಂಗಳೂರು, ಜು.19: ಭಾರತೀಯ ರುಪಾಯಿಗೆ ಹೊಸ ಚಿಹ್ನೆಯಂತೂ ಸಿಕ್ಕಿದೆ. ಆದರೆ ಅದನ್ನು ನಿಮ್ಮ ಗಣಕಕ್ಕೆ ಇಳಿಸಿಕೊಳ್ಳುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ?, ಚಿಂತೆ ಬೇಡ. ಅದಕ್ಕೆ ಇಲ್ಲಿದ ಪರಿಹಾರ.

ಮಂಗಳೂರು ಮೂಲದ ಫೊರಾಡಿಯನ್ ಟೆಕ್ನಾಲಜೀಸ್ ಪ್ರೈ.ಲಿ., ರೂಪಾಯಿ ಚಿಹ್ನೆಯನ್ನು ಕಂಪ್ಯೂಟರ್‌ನಲ್ಲಿ ಬಳಸಲು ಸಾಧ್ಯವಾಗುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದು, ಅದನ್ನು 'ರುಪೀ_ಫೊರಾಡಿಯನ್' ಎಂದು ಕರೆದಿದೆ.

ಕಂಪನಿಯ ಬ್ಲಾಗ್ ನಲ್ಲಿ http://blog.foradian.com ನಲ್ಲಿ ರೂಪಾಯಿ ಚಿಹ್ನೆಯನ್ನು (ಫಾಂಟ್2.0 ಆವೃತ್ತಿ) ಕಂಪ್ಯೂಟರ್‌ಗಳಿಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಉಚಿತ ಸೇವೆಯಾಗಿರುವುದು ಇನ್ನೊಂದು ವಿಶೇಷ.

'ವರ್ಷದೊಳಗೆ ಹೊಸ ಚಿಹ್ನೆಯನ್ನುಸಾಮಾನ್ಯ ಬಳಕೆಗೆ ದೊರೆಯುವಂತೆ ಮಾಡಲು ಪ್ರಯತ್ನಿಸುವುದಾಗಿ ಕೇಂದ್ರ ಸರಕಾರ ಪ್ರಕಟಿಸಿದೆ. ನಾವು ಆಧುನಿಕ ತಂತ್ರಜ್ಞಾನದ ಪ್ರಯೋಜನ ಪಡೆದು, ಹೊಸ ಚಿಹ್ನೆಯನ್ನು ಕಂಪ್ಯೂಟರ್‌ಗಳಲ್ಲಿ ಬಳಸಲಾಗುವಂತೆ ಮಾಡಿದ್ದೇವೆ' ಎಂದು ಕಂಪನಿಯ ಸಿಇಒ ಉಣ್ಣಿ ಕರೋಥ್ ಹೇಳಿದ್ದಾರೆ.

ಕೀಲಿ ಮಣೆಯಲ್ಲಿನ tab ಬಟನ್ ಒತ್ತುವ ಮೂಲಕ ರೂಪಾಯಿ ಚಿಹ್ನೆಯನ್ನು ಗಣಕದ ಪರದೆ ಮೇಲೆ ಮೂಡಿಸಬಹುದು. ಯೂಟ್ಯೂಬ್ ವೆಬ್‌ಸೈಟ್‌ನಲ್ಲಿ (www.youtube.com/ watch?v=XSfhzuU7Crw) ಈ ಬಗ್ಗೆ
ಪ್ರಾತ್ಯಕ್ಷಿಕೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+