ಲೋಕಾಯುಕ್ತರ ಬಲೆಗೆ ಬಿಬಿಎಂಪಿ ಸದಸ್ಯ

ಗಣೇಶ ಮಂದಿರ ವಾರ್ಡ್ ನ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಗುತ್ತಿಗೆದಾರರೊಬ್ಬರಿಂದ 2 ಲಕ್ಷ ರುಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಕತ್ರಿಗುಪ್ಪೆಯಲ್ಲಿ ಉದಯ್ ಕುಮಾರ್ ಎಂಬುವವರು ಪಾಲಿಕೆಯಿಂದ ನಕ್ಷೆ ಮಂಜೂರಾತಿ ಪಡೆದು ಬಹುಮಹಡಿ ನಿರ್ಮಿಸುತ್ತಿದ್ದಾರೆ. ಗೋವಿಂದರಾಜು ಸದಸ್ಯರಾದ ನಂತರ ಕಟ್ಟಡ ಪರಿಶೀಲಿಸಿದ್ದರು. ನಕ್ಷೆ ಮತ್ತು ಬೈಲಾ ಉಲ್ಲಂಘಿಸಲಾಗಿದೆ ಎಂದು ಹೇಳಿ ನಿರ್ಮಾಣ ಸ್ಥಗಿತಕ್ಕೆ ಆದೇಶಿಸಲಾಗಿತ್ತು.
ಕಾಮಗಾರಿ ಮುಂದುವರಿಯಬೇಕಾದರೆ 8 ಲಕ್ಷ ರುಪಾಯಿಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, 5 ಲಕ್ಷ ರುಪಾಯಿಗೆ ಡೀಲ್ ಕುದುರಿತ್ತು. ತಿಂಗಳ ಹಿಂದೆ ಉದಯ್ ಕುಮಾರ್ ಅವರು ಗೋವಿಂದರಾಜು ಅವರಿಗೆ 2 ಲಕ್ಷ ರುಪಾಯಿಗಳನ್ನು ನೀಡಿದ್ದರು.
ಉಳಿದ ಹಣ ನೀಡುವಂತೆ ಉದಯ್ ಕುಮಾರ್ ಅವರಿಗೆ ಗೋವಿಂದರಾಜು ಪದೆಪದೇ ದೂರವಾಣಿ ಮಾಡುತ್ತಿದ್ದರು. ಇದರಿಂದ ಬೇಸತ್ತ ಉದಯ್ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು.











Click it and Unblock the Notifications