2013ಕ್ಕೆ ಮೋನೊ ರೈಲು ಬಿಡುತ್ತೀವಿ ಎಂದ ಸಿಎಂ

After BMRCL Metro, now Monorail project begins
ಬೆಂಗಳೂರು, ಜು.6: ಬೆಂಗಳೂರು ನಗರದಲಿ ಮೆಟ್ರೋ ಜೊತೆಗೆ ಮೋನೊ ರೈಲು ಕೂಡಾ ಸಂಚರಿಸಲಿದೆ . 2012 ಜನವರಿಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ಕೆ ಜೆ ಜಾರ್ಜ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ನಗರದ ಎಲ್ಲಾ ಭಾಗಗಳಿಗೂ(ಸುಮಾರು 40 ಕಿ.ಮೀ ವ್ಯಾಪ್ತಿಗೆ) ಮೆಟ್ರೋ ಅಥವಾ ಮೋನೊ ರೈಲುಸಂಪರ್ಕ ಕಲ್ಪಿಸುವ ಉದ್ದೇಶವಿದೆ. ಮುಂಬರುವ ಜನವರಿಯಲ್ಲಿ ಮೋನೋ ರೈಲು ಕಾಮಗಾರಿ ಆರಂಭವಾಗಿ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಡಿಸೆಂಬರ್ ಗೆ ಮೆಟ್ರೋ ಪೂರ್ಣ: ಬೈಯಪ್ಪನಹಳ್ಳಿ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣ ನಡುವಿನ ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ ವೇಳೆಗೆ ರೈಲು ಓಡಾಟ ಆರಂಭವಾಗಲಿದೆ ಎಂದರು.

ಮೆಟ್ರೋ ರೈಲು ಕಾಮಗಾರಿಗೆ ಇದುವರೆವಿಗೂ ಸುಮಾರು 2,700 ಕೋಟಿ ರು ಗಳನ್ನು ಖರ್ಚು ಮಾಡಲಾಗಿದೆ. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ನಮ್ಮ ಆಡಳಿತಾವಧಿಯಲ್ಲಿ ಶೇ. 25 ರಷ್ಟು ಪ್ರಗತಿಯನ್ನು ಮೆಟ್ರೋ ಕಾಮಗಾರಿ ಕಂಡಿದೆ.

ಮೆಟ್ರೋ ರೈಲು ಓಡಾಟಕ್ಕೆ ಬೇಕಾದ 151 ಮೈಲಿಗಲ್ಲುಗಳ ಪೈಕಿ 94 ಮೈಲಿಗಲ್ಲುಗಳು ಸಂಪೂರ್ಣಗೊಂಡಿದೆ. ಜೂ.13, 2013ಕ್ಕೆ ಎಲ್ಲೆಡೆ ಮೆಟ್ರೋ ರೈಲು ಓಡಾಟ ಆರಂಭವಾಗಲಿದೆ. ಪ್ರಸ್ತುತ ಯೋಜನೆ ಅನ್ವಯ ಮೆಟ್ರೋ ರೈಲು ಸಂಚಾರ ಸುಮಾರು 42 ಕಿ.ಮೀ ನಷ್ಟಿದ್ದು, ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ , ಮೈಸೂರು ರಸ್ತೆಯಿಂದ ಕೆಂಗೇರಿ, ಹೆಸರಘಟ್ಟದಿಂದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ವರೆಗೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+