ಯಾವುದೇ ರಹಸ್ಯ ಸಭೆ ನಡೆಸಿಲ್ಲ:ಆರ್ ಅಶೋಕ್

'ಈಶ್ವರಪ್ಪ ಹಾಗೂ ಸದಾನಂದಗೌಡ ಮುಖಾಮುಖಿ ಮಾತನಾಡಿದ್ದಾರೆ. ಇದು ಆಂತರಿಕ ವಿಷಯ ನಾವು ಬಗೆಹರಿಸಿಕೊಳ್ಳುತ್ತೇವೆ. ಸದಾನಂದಗೌಡ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ಈಶ್ವರಪ್ಪ ಅವರಿಗೆ ತಿಳಿದಿದೆ.
ಯಾವುದೇ ಬೇಡಿಕೆ ಸರ್ಕಾರದ ಮುಂದಿಟ್ಟಿಲ್ಲ. ಭಿನ್ನಮತ ಚಟುವಟಿಕೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಸಾರಿಗೆ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ರಾತ್ರಿ ಸದಾನಂದ ಗೌಡರ ನಿವಾಸದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಾಸಕರು, ಮುಖಂಡರು ಸಭೆ ಸೇರಿ, ಸರ್ಕಾರದಲ್ಲಿ ಒಕ್ಕಲಿಗ ಗೌಡ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂದು ಆಗ್ರಹಿಸಲು ನಿರ್ಧರಿಸಲಾಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವುದು, ಸದಾನಂದಗೌಡರಿಗೆ ಸೂಕ್ತ ಸ್ಥಾನಮಾನ ನೀಡುವುದು ಒಕ್ಕಲಿಗ ಸಮುದಾಯದ ಆದ್ಯ ಬೇಡಿಕೆ ಎನ್ನಲಾಗಿದೆ.
ವಿಧಾನಮಂಡಲ ಅಧಿವೇಶನದ ನಂತರ ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸಿ, ಸದಾನಂದಗೌಡರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ವಿಶ್ವಸನೀಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.












Click it and Unblock the Notifications