ಮುಂಬೈ ಪೊಲೀಸರ ಬಲೆಗೆಬಿದ್ದ ಗಣಿಧಣಿ
ಮುಂಬೈ,
ಜೂ.24: ಗಣಿ ಉದ್ಯಮಿ , ಕಾಂಗ್ರೆಸ್ ಶಾಸಕ ಸಂತೋಷ್ ಲಾಡ್ ಅವರನ್ನು ಬುಧವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದಾರೆ. ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಲಾಡ್ ಅವರು, ದುಬೈಗೆ ತೆರಳಲು ಮುಂಬೈಗೆ ಬಂದಿದ್ದರು. ಲಾಡ್ ಅವರ ಬಂಧನ ಪ್ರಕರಣಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. id="toptextpromo">ರಿಯಲ್
ಎಸ್ಟೇಟ್ ವಂಚನೆ, ನಕಲಿ ದಾಖಲೆ ಸೃಷ್ಟಿ, ಫೋರ್ಜರಿ ಮುಂತಾದ ಪ್ರಕರಣದಲ್ಲಿ ಆರೋಪಿಯಾಗಿರುವ ಸಂತೋಷ್ ಲಾಡ್ ಅವರ ಮೇಲೆ ದೆಹಲಿ ಪೊಲೀಸರು ಬಲೆ ಬೀಸಿದ್ದರು. ಲುಕ್ ಔಟ್ ಸರ್ಕೂಲ್ಯರ್ ಹೊರಡಿಸಿ ದೇಶದ ಎಲ್ಲಾ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳಿಗೆ ಲಾಡ್ ಬಗ್ಗೆ ಮಾಹಿತಿ ರವಾನಿಸಲಾಗಿತ್ತು. ನಿನ್ನೆ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಲಾಡ್ ಅವರನ್ನು ಬಂಧಿಸಿ, ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ದೆಹಲಿ
ಪೊಲೀಸರ ಮಾಹಿತಿಯ ಮೇರೆಗೆ ಲಾಡ್ ಅವರನ್ನು ಇಮ್ರಿಗೇಷನ್ ಅಧಿಕಾರಿಗಳು ತಡೆದು, ಬಂಧಿಸಲು ಮುಂದಾದಾಗ, ಕೋಪಗೊಂಡ ಗಣಿ ಧಣಿ ಲಾಡ್, ತಾನ್ಯಾರು, ತನ್ನ ಪ್ರಭಾವವೇನು ಎಂದು ಕೂಗಾಡಿ, ಬೊಬ್ಬೆ ಹಾಕಿದರೂ, ಕ್ಯಾರೆ ಎನ್ನದ ಮುಂಬೈನ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.











Click it and Unblock the Notifications