ವಿಶ್ವಕಪ್ ನಿಂದ ಹೊರಬೀಳುವ ಮೊದಲ ತಂಡ?

ಜೋಹಾನ್ಸ್ ಬರ್ಗ್, ಜೂ.20: ಫೀಫಾ ವಿಶ್ವಕಪ್ 2010 ಟೂರ್ನಿಯ ಫಲಿತಾಂಶಗಳು ಫುಟ್ಬಾಲ್ ಪಂಡಿತರ ಹಾಗೂ ಬುಕ್ಕಿಗಳ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುತ್ತಿದೆ. ಆಚ್ಚರಿ ಎಂಬಂತೆ ಏಷ್ಯಾ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಆಫ್ರಿಕದ ತಂಡಗಳಿಂದ ನಿರೀಕ್ಷಿತ ಪ್ರದರ್ಶನವಿಲ್ಲ, ಯುರೋಪಿನ್ ತಂಡಗಳು ಹಿಂದುಳಿದಿವೆ.

ಮುಂದಿನ ಸುತ್ತಿಗೆ ಪ್ರವೇಶ ಪಡೆವ ನಿರೀಕ್ಷಿತ ತಂಡಗಳು ಮೊದಲ ಸುತ್ತಿನಲ್ಲೇ ನಿರ್ಗಮಿಸುವ ಸೂಚನೆಗಳು ಕಂಡುಬಂದಿವೆ. ಆಫ್ರಿಕಾದ ಬಲಿಷ್ಠ ತಂಡಗಳಲ್ಲಿ ಒಂದಾದ ಕೆಮರೂನ್, ಟೂರ್ನಿಯಿಂದ ಹೊರ ಬೀಳುವ ಕಾಲ ಸನ್ನಿಹಿತವಾಗಿದೆ.

ಇಂಟರ್ ಮಿಲಾನ್ ಪರ ಆಡುವ ಸ್ಯಾಮುಯಲ್ ಎಟೋ, ಪೆರ್ರೆ ವೆಬೂ, ಎರಿಕ್ ಚೌಪ್ರೊ ಮುಂತಾದ ಆಟಗಾರರಿದ್ದರೂ ತನ್ನ ಎಂದಿನ ಛಾಪು ಮೂಡಿಸುವಲ್ಲಿ ಕೆಮರೂನ್ ಸೋತಿದೆ. ಈ ಗುಂಪಿನಲ್ಲಿರುವ ಕೆಮರೂನ್ ಜಪಾನ್ ಹಾಗೂ ಡೆನ್ಮಾರ್ಕ್ ವಿರುದ್ಧ ಸತತ ಸೋಲುಂಡಿದೆ.

'ಈ 'ಗುಂಪಿನ ಅಂತಿಮ ಪಂದ್ಯವನ್ನು ಜೂ.25ರಂದು ಕೇಪ್ ಟೌನ್ ನಲ್ಲಿ ಅಗ್ರಸ್ಥಾನದಲ್ಲಿರುವ ಹಾಲೆಂಡ್ ವಿರುದ್ಧ ಆಡಲಿದ್ದು, ಒಂದು ವೇಳೆ ಆ ಪಂದ್ಯ ಗೆದ್ದರೂ ಮುಂದಿನ ಹಂತಕ್ಕೆ ಅರ್ಹತೆ ಗಳಿಸುವುದು ಕಷ್ಟ. ಸದ್ಯದ ಅಂಕಿ ಅಂಶಗಳ ಪ್ರಕಾರ 'ಈ 'ಗುಂಪಿನಿಂದ 16 ರ ಸುತ್ತು ಪ್ರವೇಶಿಸುವ ಮೊದಲ ತಂಡವಾಗಿ ನೆದರ್ ಲ್ಯಾಂಡ್ ಹೊರಹೊಮ್ಮಿದೆ.

ಕೆಮರೂನ್ ವಿರುದ್ಧ ಸೋತರೂ ನೆದರ್ ಲ್ಯಾಂಡ್ 6 ಅಂಕಗಳಿಂದ ಎರಡನೇ ತಂಡವಾಗಿಯಾದರೂ ಪ್ರವೇಶ ಖಚಿತ ಪಡಿಸಿಕೊಂಡಿದೆ. ಆದರೆ, ಜಪಾನ್ ತಂಡ ಜೂ.25 ರಂದು ಡೆನ್ಮಾರ್ಕ್ ಅನ್ನು ಉತ್ತಮ ಗೋಲುಗಳ ಅಂತರದಿಂದ ಮಣಿಸಬೇಕು.ಪಂದ್ಯ ಡ್ರಾ ಆದರೂ ಜಪಾನ್ ಮುಂದಿನ ಹಂತಕ್ಕೆ ಹೋಗುವುದು ಗ್ಯಾರಂಟಿ. ಡೆನ್ಮಾರ್ಕ್ ಈ ಪಂದ್ಯವನ್ನು ಗೆಲ್ಲಲೇ ಬೇಕು.

ಸಾರಾಂಶ: 'ಈ' ಗುಂಪಿನಿಂದ ನೆದರ್ ಲ್ಯಾಂಡ್, ಜಪಾನ್ ಅಥವಾ ಡೆನ್ಮಾರ್ಕ್ ಮುಂದಿನ ಸುತ್ತಿಗೆ ಗ್ಯಾರಂಟಿ. ಕೆಮರೂನ್ ವಿಶ್ವಕಪ್ ನಿಂದ ಹೊರಬೀಳಲಿರುವ ಮೊದಲ ತಂಡ. ಅಫ್ರಿಕನ್ ಫುಟ್ಭಾಲ್ ಅಭಿಮಾನಿಗಳಿಗೆ ಕಹಿ ಸುದ್ದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+