ಫ್ರಾನ್ಸ್ ಫುಟ್ಬಾಲ್ ಎಫ್ ಪದ ಅನೆಲ್ಕಾ ವಿದಾಯ

ಇದರಿಂದ ನೊಂದ ಅನೆಲ್ಕಾ ಶನಿವಾರ ಫ್ರಾನ್ಸ್ ಫುಟ್ಬಾಲ್ ತಂಡಕ್ಕೆ ವಿದಾಯ ಹೇಳಿದ್ದಾರೆ. ಆದರೆ, ಚೆಲ್ಸಿಯಾ ಕ್ಲಬ್ ಪರ ಆಡುವ ಸಾಧ್ಯತೆಯಿದೆ. ಜಿನದಿನ್ ಜಿದಾನೆ ಪ್ರಕರಣ ನಂತರ ಈ ಘಟನೆ ಫ್ರಾನ್ಸ್ ತಂಡಕ್ಕೆ ಕಪ್ಪು ಮಸಿ ಬಳಿದಂತಾಗಿದೆ.
ತರಬೇತಿ ಸಮಯದಲ್ಲಿ ಕಾಣಿಸಿಕೊಳ್ಳದ ಅನೆಲ್ಕಾ "F***off, you dirty son of a whore"ಎಂದು ಮಧ್ಯಂತರ ವೇಳೆಯಲ್ಲಿ ಕೋಚ್ ಉದ್ದೇಶಿಸಿ ಹೇಳಿದ್ದು ಮಾಧ್ಯಮಗಳ ಕಿವಿಗಳಿಗೆ ಕೇಳಿಸುವಂತೆ ಮಾಡಿದವರು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಯಾವ ಗುಂಪಿನಲ್ಲಿ ಯಾವ ತಂಡ || ಅಂಕಗಳ ಪಟ್ಟಿ
ಆದರೆ, ಸಾರ್ವಜನಿಕವಾಗಿ ಕ್ಷಮೆಯಾಚಿಸಲು ನಿರಾಕರಿಸಿದ ಕಾರಣ, ವಿಶ್ವಕಪ್ ತಂಡದಿಂದ ಹೊರಹಾಕಬೇಕಾಯಿತು ಎಂದು ಫ್ರೆಂಚ್ ಫುಟ್ಬಾಲ್ ಒಕ್ಕೂಟ(FFF) ತಿಳಿಸಿದೆ.
ಮೆಕ್ಸಿಕೊ ವಿರುದ್ಧದ ಮೊದಲ ಅವಧಿಯ ಆಟದಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ ಕೋಚ್ ಡೊಮೆನಿಚ್ ವಿರುದ್ದ ಅನೆಲ್ಕಾ ಅಶ್ಲೀಲವಾಗಿ ನಿಂದಿಸಿದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಫ್ರೆಂಚ್ ಫುಟ್ಬಾಲ್ ಒಕ್ಕೂಟ ಈ ನಿರ್ಧಾರ ಪ್ರಕಟಿಸಿದೆ. ಮೆಕ್ಸಿಕೋ ವಿರುದ್ಧ ಫ್ರಾನ್ಸ್ 2-0 ಅಂತರದ ಹೀನಾಯ ಸೋಲುಂಡಿತ್ತು.
ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||
ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ, ಪಂದ್ಯದ ಒತ್ತಡದ ನಡುವೆ ಕೆಟ್ಟ ಪದಗಳನ್ನು ಆಡಿದ್ದರೂ, ಕ್ಷಮೆ ಕೋರಬೇಕಿತ್ತು. ಇದು ಫ್ರಾನ್ಸ್ ತಂಡಕ್ಕೆ ದೊಡ್ಡ ಹೊಡೆತ ಎಂದಿದ್ದಾರೆ.
ಇದುವರೆವಿಗೂ ಒಂದು ಗೋಲು ದಾಖಲಿಸಲು ಆಗದೇ ಹೆಣಗುತ್ತಿರುವ ಫ್ರಾನ್ಸ್ ತಂಡ2 ಪಂದ್ಯಗಳಿಂದ ಕೇವಲ ಒಂದು ಅಂಕ ಗಳಿಸಿದೆ. ಜೂ.22 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಪಂದ್ಯವನ್ನು ಆಡಲಿದೆ.











Click it and Unblock the Notifications