ಶಿಲ್ಪಾಮೂರ್ತಿ ಮಿಸ್ಸೆಸ್ ಕರ್ನಾಟಕ 2010

ಸ್ಫರ್ಧೆಯ ತೀರ್ಪುಗಾರರಾಗಿ ನಟಿ ಟೀನಾ ಪೊನ್ನಪ್ಪ ಮತ್ತು ಅರ್ಚನ ಗುಪ್ತಾ, ಕಳಾಮಂದಿರದ ಪ್ರಧಾನ ನಿರ್ದೇಶಕ ಕಲ್ಯಾಣ್, ಇಂಡೋ ಏಷಿಯನ್ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ. ಏಕಾಂಬರ್ ಮೊದಲಾದವರುಭಾಗವಹಿಸಿ ವಿಜೇತರಿಗೆ ಕಿರೀಟ ಧಾರಣೆ ಮಾಡಿದರು.
ಸ್ಪರ್ಧೆಯಲ್ಲಿ 65 ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಮೂರು ದಿನಗಳ ತರಬೇತಿ ನಂತರ ಇವರಲ್ಲಿ 24 ಗೃಹಿಣಿಯರನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಅಂತಿಮವಾಗಿ ಮೂವರು ಬಹುಮಾನ ಪಡೆದುಕೊಂಡರು. ರ‌್ಯಾಂಪ್ ಮೇಲೆ ಬೆಕ್ಕಿನ ನಡಿಗೆ ಇಟ್ಟ ಶಿಲ್ಪಾ ಮೂರ್ತಿನೀರನ್ನು ಮಿತವಾಗಿ ಬಳಸಿ, ನೀರನ್ನು ಉಳಿಸಿ ಎಂಬ ಸಂದೇಶ ಸಾರಿದರು.
ಕಳಾಮಂದಿರ್ ಮಿಸಸ್ ಬ್ಯೂಟಿಫುಲ್ ಸ್ಕಿನ್, ಕಳಾಮಂದಿರ್ ಮಿಸ್ ಬ್ಯೂಟಿಫುಲ್ ಹೇರ್, ಮಿಸಸ್ ಬ್ಯೂಟಿಫುಲ್ ಐ, ಮಿಸಸ್ ಬ್ಯೂಟಿಫುಲ್ ಸ್ಮೈಲ್, ಮಿಸಸ್ ಬ್ಯೂಟಿಫುಲ್ ಕ್ಯಾಟ್‌ವಾಕ್, ಮಿಸಸ್ ಫೋಟೋಜೆನಿಕ್, ಮಿಸಸ್ ಕಂಜಿನಿಯಾಲಿಟಿ, ಪರ್ಸನಾಲಿಟಿ, ಮಿಸಸ್ ಟ್ಯಾಲೆಂಟ್ ಮುಂತಾದ ಪ್ರಶಸ್ತಿಗಳನ್ನು ನೀಡಲಾಯಿತು.












Click it and Unblock the Notifications