ಮಂಡೇಲಾಗೆ ಮರಿಮೊಮ್ಮಗಳ ಸಾವಿನ ಆಘಾತ
ಜೋಹಾನ್ಸ್
ಬರ್ಗ್, ಜೂ. 11 : ಕಗ್ಗತ್ತಲ ನಾಡೆಂದು ಕರೆಯಲಾಗುವ ದಕ್ಷಿಣ ಆಫ್ರಿಕಾದಲ್ಲಿ ಫೀಫಾ ವಿಶ್ವಕಪ್ ಹೊಂಗಿರಣ ಚೆಲ್ಲುತ್ತಿರುವ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ನೆಲ್ಸನ್ ಮಂಡೇಲಾ ಅವರ ಮರಿಮೊಮ್ಮಗಳು ಕಾರು ಅಪಘಾತದಲ್ಲಿ ಮೃತಳಾಗಿರುವುದು ಮತ್ತೆ ಕತ್ತಲು ಕವಿದಂತೆ ಮಾಡಿದೆ. id="toptextpromo">13
ವರ್ಷದ ಜೆನಾನಿ ಮಂಡೇಲಾ ಸೊವೆಟೊ ಎಂಬಲ್ಲಿ ವಿಶ್ವಕಪ್ ಮುನ್ನಾದಿನದ ಸಂಗೀತ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವಾಗ ಅಪಘಾತಕ್ಕೀಡಾಗಿದ್ದಾಳೆ. ಈ ಸುದ್ದಿಯನ್ನು ನೆಲ್ಸನ್ ಮಂಡೇಲಾ ಫೌಂಡೇಶನ್ ದೃಢಪಡಿಸಿದೆ. id='are-slot-1' class='oiad oi-axt oiadv'> id='top-searched-articles'>ಮಂಡೇಲಾರ
9 ಮರಿಮೊಮ್ಮಕ್ಕಳಲ್ಲಿ ಒಬ್ಬಳಾಗಿರುವ ಜೆನಾನಿ ಬುಧವಾರ, ಜೂನ್ 9ರಂದು 13ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ಕಾರು ಅಪಘಾತದಲ್ಲಿ ಬೇರಾರೊಬ್ಬರಿಗೂ ಗಾಯವಾಗಿಲ್ಲ. ಈ ದುಃಖಮಯ ಕ್ಷಣಗಳನ್ನು ಅತ್ಯಂತ ಖಾಸಗಿಯಾಗಿ ಕಳೆಯಬಯಸುತ್ತೇವೆಂದು ನೆಲ್ಸನ್ ಮಂಡೇಲಾ ಕುಟುಂಬ ಹೇಳಿದೆ.











Click it and Unblock the Notifications