ಕಣ್ಕಟ್ಟು ವಿದ್ಯೆ; ಬ್ಯಾಂಕ್ ನಲ್ಲಿ ಮೂರು ಲಕ್ಷ ಮಂಗಮಾಯ
ಬೆಂಗಳೂರು,
ಜೂ.3:ಗ್ರಾಹಕನ ರೀತಿ ಸೋಗು ಹಾಕಿದ ವ್ಯಕ್ತಿಯೊಬ್ಬ ಬ್ಯಾಂಕಿನಲ್ಲಿ ಮೂರು ಲಕ್ಷ ರೂಗಳನ್ನು ದೋಚಿ ಪರಾರಿಯಾದ ಘಟನೆ ಬೆಂಗಳೂರಿನ ಮಲ್ಲೇಶ್ವರಂನ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. id="toptextpromo">ಶಾಖೆಯ
ಕ್ಯಾಶ್ ಕೌಂಟರ್ ಬಳಿ ಬಂದ ಅಪರಿಚ ವ್ಯಕ್ತಿ ನಿಶ್ಚಿತ ಠೇವಣಿ ಖಾತೆ ತೆರೆಯಬೇಕು ಎಂದು ಹೇಳಿ ಅರ್ಜಿ ಎಲ್ಲಿ ಪಡೆಯಬೇಕು ಎಂದು ಕೇಳಿದ್ದಾನೆ. ಅರ್ಜಿ ತರಲು ಕ್ಯಾಷಿಯರ್ ಜೊತೆಗೆ ವ್ಯಕ್ತಿಯೂ ಹೋಗಿದ್ದಾನೆ. ಬಳಿಕ ಕ್ಯಾಷ್ ಕೌಂಟರ್ ಗೆ ಹಿಂತಿರುಗಿ ನೋಡಿದಾಗ ಅಲ್ಲಿದ್ದ ಮೂರು ಲಕ್ಷ ಮಂಗಮಾಯವಾಗಿದೆ. ಅರ್ಜಿ ಕೇಳಿದ ವ್ಯಕ್ತಿಯೂ ನಾಪತ್ತೆ. id='are-slot-1' class='oiad oi-axt oiadv'> id='top-searched-articles'>ಆಗಷ್ಟೆ
ಲಾಕರ್ ನಿಂದ ಮೂರು ಲಕ್ಷ ರೂಗಳನ್ನು ಕ್ಯಾಷಿಯರ್ ತಂದಿಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬ್ಯಾಂಕಿನ ಮ್ಯಾನೇಜರ್ ಗೀತಾ ದಿನೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಣ ದೋಚಿ ಪರಾರಿಯಾದ ವ್ಯಕ್ತಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.











Click it and Unblock the Notifications