ಡ್ರೈವಿಂಗ್ ಲೈಸೆನ್ ಬೇಕೆ, ಆರ್ ಟಿಒನೇ ಕೇಳಿ

HC Upholds Driving Licence through RTOs
ಬೆಂಗಳೂರು, ಜೂ.2: ವಾಹನ ಚಾಲನೆ ಪರವಾನಿಗೆ(ಡ್ರೈವಿಂಗ್ ಲೈಸೆನ್ಸ್ ) ಪಡೆಯಲು ನೇರ ಮಾರ್ಗ ಬಿಟ್ಟು ದಳ್ಳಾಳಿಗಳು ಹಾಗೂ ಡ್ರೈವಿಂಗ್ ಸ್ಕೂಲ್ ಗಳ ಮೂಲಕ ಪರವಾನಿಗೆ ಪಡೆಯುತ್ತಿದ್ದ ಚಾಲಕರಿಗೆ ಹೈ ಕೋರ್ಟ್ ಚುರುಕುಮುಟ್ಟಿಸಿದೆ.

ಲೈಸೆನ್ ಅನ್ನು ನೇರವಾಗಿ ಸಾರಿಗೆ ಇಲಾಖೆಯಿಂದ ಮಾತ್ರ ಪಡೆಯಬೇಕು ಎಂದು ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ವಾಹನ ಚಾಲನಾ ತರಬೇತಿ ಶಾಲೆಗಳು ಸರ್ಕಾರದ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ನ್ಯಾ. ಆನಂದ್ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಈ ಮೇಲ್ಕಂಡ ಆದೇಶವನ್ನು ನೀಡಿದೆ.

ಎಲ್ಲಕ್ಕೂ ಕಮೀಷನ್ ಕೊಡ್ಬೇಕಿತ್ತು: ದ್ವಿಚಕ್ರ ಸೇರಿದಂತೆ ಇತರ ವಾಹನಗಳಿಗೆ ಚಾಲನ ಪರವಾನಿಗೆ ಪಡೆಯಲು ಡ್ರೈವಿಂಗ್ ಸ್ಕೂಲ್‌ಗಳೇ ಲೈಸೆನ್ಸ್ ಕೊಡಿಸುವ ವ್ಯವಸ್ಥೆ ಮಾಡುತ್ತಿದ್ದವು. ಡ್ರೈವಿಂಗ್ ಕಲಿಯಲು ಕೊಡಬೇಕಿದ್ದ ಶುಲ್ಕದ ಜೊತೆಗೆ ಲೈಸೆನ್ಸ್ ಕೊಡಿಸಲು ಕಮೀಷನ್ ಕೂಡ ಸಲ್ಲುತ್ತಿತ್ತು. ಆರ್ ಟಿಒ ಅಧಿಕಾರಿಗಳಿಗೂ ಡ್ರೈವಿಂಗ್ ಸ್ಕೂಲ್ ಗಳ ನಡುವೆ ಒಳ ಒಪ್ಪಂದಕ್ಕೆ ಏರ್ಪಟ್ಟಿರುತ್ತಿತ್ತು.

ಈ ರೀತಿಯ ಅವ್ಯವಹಾರ ಮತ್ತು ಲೈಸೆನ್ಸ್ ದುರ್ಬಳಕೆಯಾಗುತ್ತಿತ್ತು. ಈ ಸಂಬಂಧ ಸಾರ್ವಜನಿಕ ದೂರುಗಳ ಬಂದ ಹಿನ್ನಲೆಯಲ್ಲಿ ನೇರವಾಗಿ ಭ್ರಷ್ಟಚಾರ ತಡೆಗಟ್ಟುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ(RTO)ಯಿಂದ ಲೈಸೆನ್ಸ್ ನೀಡುವ ವ್ಯವಸ್ಥೆ ಮಾಡಿ ಇತ್ತೀಚೆಗೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು . ಸರ್ಕಾರದ ಸುತ್ತೋಲೆಗೆ ಹೈಕೋರ್ಟ್ ಎತ್ತಿ ಹಿಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+