ಸ್ವಾಗತ ಪಾನೀಯ ಕುಡಿದು 80 ಜನ ಅಸ್ವಸ್ಥ

ನೂತನ ದಂಪತಿ ಚಂದ್ರ ಮೌಳೀಶ್ವರ ಹಾಗೂ ತೇಜಸ್ವಿನಿ ಸೇರಿದಂತೆ ಅಸ್ವಸ್ಥಗೊಂದ ಎಲ್ಲರನ್ನೂ ಯಾದವ ಗಿರಿಯ ವಿಕ್ರಂ ಆಸ್ಪತ್ರೆ ಹಾಗೂ ಒಂಟಿ ಕೊಪ್ಪಲಿನ ವಿಕ್ರಂ ಜ್ಯೋತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 76 ಜನಕ್ಕೆ ಚಿಕಿತ್ಸೆ ನೀಡಿ ಕಳುಹಿಸಲಾಗಿದ್ದು, ಉಳಿದ ನಾಲ್ವರಿಗೆ ಇನ್ನೂ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಹಿರಿಯ ವೈದ್ಯರು ಹೇಳಿದರು.
ಮೇ.24 ರಂದು ಹಿನಕಲ್ ನ ಚಂದ್ರ ಮೌಳೀಶ್ವರ ಹಾಗೂ ಕುವೆಂಪುನಗರದ ತೇಜಸ್ವಿನಿ ಅವರ ವಿವಾಹ ನಗರದ ಗುರುರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಮೇ. 26 ರಂದು ಯಾದವಗಿರಿಯ ದಾಸಪ್ರಕಾಶ ಪ್ಯಾರಡೇಸ್ ಹೋಟೆಲ್ ನಲ್ಲಿ ಆರತಕ್ಷತೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ರಿಷಪ್ಷನ್ ಗೆ ಬಂದವರಿಗೆ ಸ್ವಾಗತ ಕೋರಿ ಹೋಟೆಲಿನವರು ನೀಡಿದ ತಂಪು ಪಾನೀಯ, ಅತಿಥಿಗಳಿಗೆ ವಿಷವಾಗಿ ಪರಿಣಮಿಸಿ ಎಲ್ಲರೂ ವಾಂತಿ ಮಾಡಿಕೊಳ್ಳತೊಡಗಿದರು. ಸುಮಾರು 80 ಜನರನ್ನು ಅಸ್ವಸ್ಥಗೊಳಿಸಿದ ತಂಪು ಪಾನೀಯವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಯಾದವ ಗಿರಿ ಪೊಲೀಸ್ ಠಾಣಾಧಿಕಾರಿ ಹೇಳಿದರು.












Click it and Unblock the Notifications