ಟೆಕ್ಕಿ ಡೆಪ್ಯೂಟಿ ಮೇಯರ್ ಗೆ ಐಎಎಸ್ ಕನಸು

ಎಂಟೆಕ್ ಪದವೀಧರರಾಗಿರುವ ದಯಾನಂದ ಅವರು ಭಾನುವಾರ ಲೋಕಸೇವಾ ಆಯೋಗ ನಡೆಸುವ ಭಾರತೀಯ ನಾಗರಿಕ ಸೇವೆ(ಐಎಎಸ್) ಪೂರ್ವಭಾವಿ ಪರೀಕ್ಷೆ ಹಾಜರಾಗಿದ್ದರು. ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅವರು ಪರೀಕ್ಷೆ ಬರೆದರು. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ನಲ್ಲಿ ಪದವಿ ಪಡೆದಿರುವ ದಯಾನಂದ, ಡಿಜಿಟಲ್ ಕಮ್ಯುನಿಕೇಷನ್ ನಲ್ಲಿ ಎಂಟೆಕ್ ಮುಗಿಸಿದ್ದಾರೆ. ಬಿಬಿಎಂಪಿಯ ಅತಿ ಕಿರಿಯ ಉಪಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ದಯಾನಂದ ಅವರಿಗೆ 27 ವರ್ಷ. ಪ್ರಥಮ ಬಾರಿಗೆ ಐಎಎಸ್ ಪರೀಕ್ಷೆಯನ್ನು ಬರೆದಿದ್ದಾರೆ.
ಐಎಎಸ್ ಅಧಿಕಾರಿಯಾಗಬೇಕು ಎಂಬುದು ಬಹುದಿನಗಳ ಕನಸು. ಅದಕ್ಕಾಗಿ ಈ ಬಾರಿ ಪರೀಕ್ಷೆಯನ್ನು ತೆಗೆದುಕೊಂಡಿರುವೆ. ಪರೀಕ್ಷೆಯನ್ನು ಉತ್ತಮವಾಗಿ ಬರೆದಿರುವೆ. ಪ್ರಿಲಿಮ್ಸ್ ನಲ್ಲಿ ಪಾಸಾಗುವೆ ಎನ್ನುವ ನಂಬಿಕೆ ಇದೆ ಎನ್ನತ್ತಾರೆ ಉಪಮೇಯರ್ ದಯಾನಂದ್.












Click it and Unblock the Notifications