2011-14 ರೊಳಗೆ ನೂತನ ಪಠ್ಯಕ್ರಮ : ಕಾಗೇರಿ
ಬೆಂಗಳೂರು,
ಮೇ. 23 : ರಾಷ್ಟ್ರೀಯ ಪಠ್ಯಕ್ರಮದಂತೆ 2011 ರಿಂದ 2014 ರ ಅವಧಿಯಲ್ಲಿ 1 ರಿಂದ 10 ನೇ ತರಗತಿವರಗೆ ಹೊಸ ಪಠ್ಯಕ್ರಮ ಜಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. id="toptextpromo">ಶಿಕ್ಷಕರ
ಸದನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಪಠ್ಯಕ್ರಮ ನೆಲೆಗಟ್ಟು 2005ರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಹಂತಹಂತವಾಗಿ ಇದು ಅನುಷ್ಟಾನಗೊಳ್ಳಲಿದೆ ಎಂದರು. ರಾಷ್ಟ್ರೀಯ ಪಠ್ಯಕ್ರಮ ಮಾರ್ಗಸೂಚಿಯಂತೆ 2011-12 ರಲ್ಲಿ 1,3,5, 8ನೇ ತರಗತಿ, 2012-13 ರಲ್ಲಿ 2,4,6,9 ಹಾಗೂ 2014 ರಲ್ಲಿ 7, 10 ನೇ ತರಗತಿ ಪಠ್ಯಕ್ರಮದಲ್ಲಿ ಬದಲಾವಣೆಯಾಗಲಿದೆ ಎಂದು ಕಾಗೇರಿ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಶಿಕ್ಷಣ
ಕ್ಷೇತ್ರ ನಿಂತ ನಿರಾಗಬಾರದು ಎಂಬ ಕಾರಣಕ್ಕೆ 2005ರಲ್ಲಿ ಕೇಂದ್ರ ಸರಕಾರವು ರಾಷ್ಟ್ರೀಯ ಪಠ್ಯಕ್ರಮ ಮಾರ್ಗಸೂಚಿಸಿದೆ. ಆದರ ಅನುಷ್ಟಾನಕ್ಕೆ ಈಗ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಪಠ್ಯಕ್ರಮದಲ್ಲಿ ಸುಧಾರಣೆ ಮಾಡಲಾಗುತ್ತಿದೆ ಎಂದು ಕಾಗೇರಿ ಹೇಳಿದರು.











Click it and Unblock the Notifications