ಸಿಇಟಿ : ಅಕ್ಷಯ್, ಶಾನುಭಾಗ್ ಅನಿಲ್ ಫಸ್ಟ್

CET 2010
ಬೆಂಗಳೂರು, ಮೇ. 23 : ಪ್ರಸಕ್ತ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ಒಟ್ಟು 77,422 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದು, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ನಲ್ಲಿ ಮೊದಲ ರ್ಯಾಂಕ್ ಕ್ರಮವಾಗಿ ಮಂಗಳೂರು ಮತ್ತು ಬೆಂಗಳೂರು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಮಂಗಳೂರಿನ ಸಂತ ಅಲೋಶಿಯಸ್ ಪದವಪೂರ್ವ ಕಾಲೇಜಿನ ಅಕ್ಷಯ್ ಪಟ್ಟಾಭಿ ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಮತ್ತು ಹೋಮಿಯೋಪತಿಯಲ್ಲಿ ಪ್ರಥಮ ರ್ಯಾಂಕ್, ಬೆಂಗಳೂರಿನ ಎಂಇಎಸ್ ಪಪೂ ಕಾಲೇಜಿನ ಎನ್ ಸುನೀಲ್ ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿಯಲ್ಲಿ ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ. ಶಾನುಭಾಗ್ ಅನಿಲ್ ಅತ್ಮಾನಂದ, ಜಿ ಗಿರಿಧರ್ ಮತ್ತು ಡಿಸಿ ವಾಗೀಶ್ ಇಂಜಿನಿಯರಿಂಗ್ ನಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ರ್ಯಾಂಕ್ ಗಳಿಸಿದ್ದಾರೆ.

ವೃತ್ತಿ ಶಿಕ್ಷಣಕ್ಕೆ ಕೋರ್ಸ್ ಗಳ ಸಂಬಂಧಿಸಿದ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ವೈದ್ಯಕೀಯ ಖಾತೆ ಸಚಿವ ರಾಮಚಂದ್ರಗೌಡ ಶನಿವಾರ ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ವೈದ್ಯಕೀಯ, ದಂತ ವೈದ್ಯಕೀಯ ವಿಭಾಗದಲ್ಲಿ 5,783, ವಿದ್ಯಾರ್ಥಿಗಳು, ಇಂಜಿನಿಯರಿಂಗ್ ನಲ್ಲಿ 71,639 ವಿದ್ಯಾರ್ಥಿಗಳು, ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿಯಲ್ಲಿ 44,468 ವಿದ್ಯಾರ್ಥಿಗಳು, ವಾಸ್ತುಶಿಲ್ಪ ಕೋರ್ಸ್ ನಲ್ಲಿ 673 ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಕಳೆದ ತಿಂಗಳ 28 ಮತ್ತು 29 ರಂದು ಸಾಮಾನ್ಯ ಸಿಇಟಿ ಪರೀಕ್ಷೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+