ರಾಜಭವನ : ರಟ್ಟಾಗದ ದೇವೇಗೌಡರ ಗುಟ್ಟು
ಬೆಂಗಳೂರು,
ಮೇ. 20 : ಸಚಿವ ಜನಾರ್ದನರೆಡ್ಡಿ ನೋಟಿಸ್ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಕಾಂಗ್ರೆಸ್ ನ ಹಲವು ನಾಯಕರು ರಾಜ್ಯಪಾಲರನ್ನು ಭೇಟಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. id="toptextpromo">ಅಕ್ರಮ
ಗಣಿಗೆ ಸಂಬಂಧಪಟ್ಟಂತೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ನೀಡಿದ್ದ ನೋಟಿಸ್ ಗೆ ಸಚಿವ ಜನಾರ್ದನರೆಡ್ಡಿ ಖಾರವಾಗಿ ನೀಡಿದ್ದ ಉತ್ತರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬುಧವಾರ ಬೆಳಗ್ಗೆ 11.30ಕ್ಕೆ ರಾಜಭವನಕ್ಕೆ ಆಗಮಿಸಿದ ದೇವೇಗೌಡ, 1 ಗಂಟೆಗೂ ಅಧಿಕ ಹೊತ್ತು ರಾಜ್ಯಪಾಲರೊಂದಿಗೆ ಮಾತನಾಡಿದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನ ಮುಖಂಡರಾದ ಸಿದ್ಧರಾಮಯ್ಯ, ಎಂಪಿ ಪ್ರಕಾಶ್, ಕೆ ಸಿ ಕೊಂಡಯ್ಯ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದರಲ್ಲದೇ ಮಹತ್ವದ ದಾಖಲೆಗಳನ್ನು ರಾಜ್ಯಪಾಲರಿಗೆ ನೀಡಿದ್ದಾರೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ನಂತರ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವೇಗೌಡ, ಗಣಿ ಸಚಿವರ ಬಗ್ಗೆ ನಾನೇನೂ ಮಾತನಾಡಿಲ್ಲ. ಎಲ್ಲವೂ ರಾಜ್ಯಪಾಲರಿಗೆ ಗೊತ್ತಿದೆ ಎಂದಷ್ಟೆ ಹೇಳಿದ್ದಾರೆ. ಕೇಂದ್ರದ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಎನ್ ಆರ್ಇಜಿ ಹಣ ಕೂಡ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಖರ್ಚು ಮಾಡಲಾಗುತ್ತಿದೆ. ಈ ಬಗ್ಗೆ ಸರಕಾರಕ್ಕೆ ಸೂಕ್ತ ಸಲಹೆ ನೀಡಬೇಕೆಂದು ಮನವಿ ಮಾಡಲು ರಾಜ್ಯಪಾಲರನ್ನು ಭೇಟಿ ಮಾಡಿರುವುದಾಗಿ ಗೌಡರು ಹೇಳಿದರು.











Click it and Unblock the Notifications