ಹೊಗೇನಕಲ್ ನಲ್ಲಿ ಗಡಿ ಉಲ್ಲಂಘಿಸಿಲ್ಲ : ಸ್ಟಾಲಿನ್
ಧರ್ಮಪುರಿ,
ಮೇ. 18 : ಹೊಗೇನಕಲ್ ಕುಡಿಯುವ ನೀರು ಯೋಜನೆಯಲ್ಲಿ ಕರ್ನಾಟಕದ ಗಡಿ ಅತಿಕ್ರಮಿಸಿಲ್ಲ ಎಂದುಪ ತಮಿಳುನಾಡು ಉಪಮಖ್ಯಮಂತ್ರಿ ಎಂಕೆ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ. id="toptextpromo">
ಸೋಮವಾರ
ಹೊಗೇನಕಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಪಾನ್ ನೆರವಿನಿಂದ 1,928 ಕೋಟಿ ರುಪಾಯಿ ಯೋಜನೆಯ ಪ್ರದೇಶ ತಮಿಳುನಾಡಿನ ಗಡಿಯೊಳಗೇ ಇದೆ. ಹಾಗಾಗಿ ಕರ್ನಾಟಕ ಗಡಿಯನ್ನು ಉಲ್ಲಂಘಿಸುವ ಇಲ್ಲವೇ ಅತಿಕ್ರಮಿಸುವ ಪ್ರಶ್ನೆಯೇ ಇಲ್ಲ ಎಂದರು. id='are-slot-1' class='oiad oi-axt oiadv'> id='top-searched-articles'>ತಮಿಳುನಾಡು
ತನ್ನ ಜನರಿಗಾಗಿ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಆದರೆ, ಕರ್ನಾಟಕ ಸರಕಾರ ಮತ್ತು ಅಲ್ಲಿನ ಪ್ರತಿಪಕ್ಷಗಳು, ಕೆಲ ಸಂಘಟನೆಗಳು ಅಪ್ರಪ್ರಚಾರದಲ್ಲಿ ತೊಡಗಿವೆ ಎಂದು ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿದರು. ಹೊಗೇನಕಲ್ ಯೋಜನೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.











Click it and Unblock the Notifications