ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಫುಟ್ಬಾಲ್ ವಿಶ್ವಕಪ್ ಮೇಲೆ ಅಲ್ ಖೈದಾ ನೆರಳು
ನಜಫ್ ಹಾಗೂ ಕರ್ಬಾಲಾದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಉಗ್ರಗಾಮಿ ಚಟುವಟಿಕೆ ಉದ್ದೀಪನಗೊಳಿಸಲು ಈತನನ್ನು ಸ್ವತಃ ಒಸಾಮಾ ಬಿನ್ ಲಾಡೆನ್ ನ ಬಲಗೈ ಬಂಟ ಅಯ್ಮಾನ್ ಅಲ್ ಜವಹಿರಿ ಗೊತ್ತು ಮಾಡಿದ್ದನ್ನು ಎಂದು ಬಾಗ್ದಾದ್ ನ ಸುರಕ್ಷತಾ ಇಲಾಖೆ ವಕ್ತಾರ ಖಾಸಿಂ ಅಲ್ ಮೌಸವಿ ಹೇಳಿದ್ದಾರೆ.
ನೈಜಿರಿಯಾ ಮೂಲದ ಇನ್ನೊಬ್ಬ ಶಂಕಿತನನ್ನು ಬಂಧಿಸಲಾಗಿದೆಯಾದರೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ. ಫುಟ್ಬಾಲ್ ವಿಶ್ವಕಪ್ ಭದ್ರತೆಗಾಗಿ ಸುಮಾರು 41ಸಾವಿರಪೊಲೀಸರು ಹಾಗೂ ಮಿಲಿಟರಿ ಸೈನಿಕರನ್ನು ನಿಯೋಜಿಸಲಾಗಿದೆ. ಸುರಕ್ಷತೆ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದು ಬೃಹತ್ ಪರೇಡ್ ನಂತರ ದಕ್ಷಿಣ ಆಫ್ರಿಕಾದ ಪೊಲೀಸ್ ಇಲಾಖೆ ಸಚಿವ ನಾಥಿ ಥೆತ್ವಾ ಹೇಳಿದರು.
Comments
ವಿಶ್ವಕಪ್ ದಕ್ಷಿಣ ಆಫ್ರಿಕಾ ಅಲ್ ಖೈದಾ ಫುಟ್ಬಾಲ್ ಕ್ರೀಡೆ ಫುಟ್ಬಾಲ್ ವಿಶ್ವಕಪ್ ಬಿನ್ ಲಾಡೆನ್ world cup fifa fifa world cup soccer al qaeda iraq terrorism ಫೀಫಾ 2010 fifa 2010
Story first published: Tuesday, June 8, 2010, 10:28 [IST]