ಟಿಪ್ಪು ಡ್ರಾಪಿನಲ್ಲಿ ಮಹಿಳೆಯರ ಆತ್ಮಹತ್ಯೆ?

Nandi Hills
ಬೆಂಗಳೂರು, ಮೇ. 15: ಬೆಂಗಳೂರಿನ ನಿವಾಸಿ ವಿದ್ಯಾ ಎಂಬುವವರು ನಂದಿಬೆಟ್ಟದ ಟಿಪ್ಪು ಡ್ರಾಪ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ವಿದ್ಯಾ ಬೆಂಗಳೂರಿನವರಾಗಿದ್ದು ಬೆಟ್ಟಕ್ಕೆ ಶುಕ್ರವಾರ ಕಾರಿನಲ್ಲಿ ತೆರಳಿದ್ದರು. ಅವರ ಸಾವು ಆಕಸ್ಮಿಕವೋ ಅಥವಾ ಅಲ್ಲವೋ ಎಂಬ ಬಗ್ಗೆ ಹಲವು ಅನುಮಾನಗಳು ತಲೆದೋರಿದ್ದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದೇ ವೇಳೆ ಇನ್ನೊಬ್ಬ ಮಹಿಳೆ ಟಿಪ್ಪು ಡ್ರಾಪಿನಿಂದ ಹಾರಿ ಸಾವನ್ನಪ್ಪಿರುವ ಘಟನೆ ಶುಕ್ರವಾರದಂದೇ ಬೆಳಕಿಗೆ ಬಂದಿದೆ. ದುರ್ದೈವಿಯ ಹೆಸರು ವಾಣಿ ದಯಾನಂದ್ ( 48). ವಾಣಿಯವರು ಬೆಂಗಳೂರಿನ ಸಂಜಯನಗರದವರು.

ರಸ್ತೆ ಅಪಘಾತ : ಫ್ರೇಜರ್ ಟೌನ್ ನಿಂದ ಲಿಂಗರಾಜಪುರದ ಕಡೆಗೆ ಚಲಿಸುತ್ತಿದ್ದ ಮರದ ತುಂಡು ತುಂಬಿದ ಲಾರಿ ನಿಯಂತ್ರಣ ತಪ್ಪಿದುದರಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ ಮೂವರಿಗೆ ಗಾಯಗಳಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

ಮೃತಪಟ್ಟವರು ವಸಂತನಗರದ ನಿವಾಸಿ ರೋಹನ್ ಜಯರಾಜ್ ( 30) ಮತ್ತು ಇಂದಿರಾನಗರದ ನಿವಾಸಿ ಪೂರ್ಣಿಮಾ ( 26). ಇವರಿಬ್ಬರೂ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಯುವಕ ಯುವತಿ ಸದ್ಯದಲ್ಲೇ ಮದುವೆಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಪೂರ್ಣಿಮಾ ನಂಜನಗೂಡಿನವರು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+