ಗೂಗಲ್ ನೋಟಿಸ್ ಬಂದರೆ ಎಚ್ಚರ!

ನಿಮ್ಮ ಇಮೇಲ್ ಖಾತೆಯ ಸುರಕ್ಷತೆಗಾಗಿ ನಿಮ್ಮ ಹೆಸರು, ಸ್ವವಿವರಗಳನ್ನು ಮತ್ತೊಮ್ಮೆ ದಾಖಲಿಸಿ, ಇಲ್ಲದಿದ್ದರೆ ಇನ್ನು ಏಳು ದಿನಗಳಲ್ಲಿ ನಿಮ್ಮ ಖಾತೆ ನಶಿಸಿಹೋಗುವುದು ಎಂದು ವಿವರ ಬೇಡುವ ಈ ಇಮೇಲ್ ಅಸಲಿ ಎಂದು ನಂಬಿ ಕೆಲವರು ಅರ್ಜಿ ತುಂಬಿಸಿ ರಿಪ್ಲೆ ಮಾಡಿದ್ದಾರೆ ಕೂಡಾ. ಕೆಲವರು ಇದರ ಬಗ್ಗೆ ತಿಳಿಯದೇ ಹಾಗೆ ಬಿಟ್ಟಿದ್ದಾರೆ. ಒಟ್ಟಿನಲ್ಲಿ ಕೀಟಲೆ ಮಾಡುವವರ ಕೈಗೆ ಅಸಂಖ್ಯಾತ ಜನ ಸಿಕ್ಕಿದ್ದ್ದಂತೂ ನಿಜ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ , ಈ ರೀತಿ ಯಾವುದೆ ಇ ಪತ್ರವನ್ನು ಸಂಸ್ಥೆ ಕಳಿಸಿಲ್ಲ. ಇದು ಸ್ಲ್ಯಾಪರ್ ಹಾಗೂ ವಂಚಕರ ಕೈವಾಡ.ಪಾಸ್ ವರ್ಡ್ ಹಾಗೂ ಖಾಸಗಿ ವಿವರ ಪಡೆಯಲು ಹೂಡಿರುವ ತಂತ್ರವಾಗಿದೆ. ಈ ರೀತಿಯ ಮಾಸ್ ಇಮೇಲ್ ಗಳನ್ನು ಸಂಸ್ಥೆ ಕಳಿಸುವುದಿಲ್ಲ. ದಯವಿಟ್ಟು ಈ ರೀತಿ ಮೇಲ್ ಬಂದರೆ ನಂಬಬೇಡಿ ಎಂದು ಸಂಸ್ಥೆ ಹೇಳಿದೆ.
ಬ್ಯಾಂಕಿಂಗ್ ವೆಬ್ ಸೈಟ್ ಗಳಲ್ಲದೆ, ಉಚಿತ ಇ ಮೇಲ್ ಸೇವೆ ಒದಗಿಸುವ ಜೀಮೇಲ್, ಯಾಹೂ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಆರ್ಕುಟ್ ಗಳಲ್ಲಿರುವ ಹೆಚ್ಚು ಜಾಲಾಡುವ ವ್ಯಕ್ತಿಯ ಖಾಸಗಿ ವಿವರ ಪಡೆಯಲು ಯತ್ನಿಸುವುದು ಸೈಬರ್ ಕ್ರಿಮಿನಲ್ ಗಳ ಸಾಮಾನ್ಯ ಚಹರೆ ಎನ್ನುತ್ತಾರೆ IAMAI ನ ರಕ್ಷಿತ್ ತಂಡನ್.
ಸೈಬರ್ ಕ್ರೈಂಗಳು ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಜನಾರ್ದನ ರೆಡ್ಡಿ ಅವರ ಪತ್ನಿಯ ಬ್ಯಾಂಕ್ ಖಾತೆಗೆ ಮುಂಬೈ ಮೂಲಕ ಯುವಕ ಕನ್ನ ಹಾಕಿದ್ದ. ಸೈಬರ್ ಕ್ರಿಮಿನಲ್ ಗಳ ದಾಳಿಗೆ ತುತ್ತಾಗಿ ಮುಂಬೈನ ಶಾಲಾ ಶಿಕ್ಷಕಿಯೊಬ್ಬರು ಸುಮಾರು 10 ಲಕ್ಷ ಕಳೆದುಕೊಂಡಿದ್ದರು.












Click it and Unblock the Notifications