ಓಎಂಸಿ ಗಣಿಗಾರಿಕೆಗೆ ಸುಪ್ರಿಂಕೋರ್ಟ್ ಅಸ್ತು
ನವದೆಹಲಿ,
ಮೇ. 10 : ಗಡಿ ಪ್ರದೇಶದಿಂದ 150 ಮೀಟರ್ ದೂರದಿಂದಾಚೆಗೆ ಗಣಿಗಾರಿಕೆ ನಡೆಸಲು ಓಬಳಾಪುರಂ ಮೈನಿಂಗ್ ಕಂಪನಿಗೆ ಷರತ್ತು ಬದ್ಧ ಅನುಮತಿಯನ್ನು ಸುಪ್ರಿಂಕೋರ್ಟ್ ನೀಡಿ ಮಹತ್ವದ ಆದೇಶ ಹೊರಡಿಸಿದೆ. ಇದರಿಂದ ರೆಡ್ಡಿ ಸಹೋದರರಿಗೆ ತಾತ್ಕಾಲಿಕ ಗೆಲುವು ದೊರೆತಂತಾಗಿದೆ. id="toptextpromo">ಸೋಮವಾರ
ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್, ದೀಪಕ್ ವರ್ಮಾ ಹಾಗೂ ಬಿ ಎಸ್ ಚೌಹಾಣ್ ನೇತೃತ್ವದ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪನ್ನು ನೀಡಿದೆ. ಓಬಳಾಪುರಂ ಮೈನಿಂಗ್ ಕಂಪನಿಯೂ ಗಡಿ ಪ್ರದೇಶವನ್ನು ಹೊರತುಪಡಿಸಿ ಗಣಿಗಾರಿಕೆ ನಡೆಸಬಹುದು ಎಂದು ಪೀಠ ಹೇಳಿದೆ. id='are-slot-1' class='oiad oi-axt oiadv'> id='top-searched-articles'>ಆಂಧ್ರಪ್ರದೇಶದ
ಅನಂತಪುರ ಜಿಲ್ಲೆಯಲ್ಲಿರುವ ಕರ್ನಾಟಕ ಸರಕಾರದ ಸಚಿವರಾದ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಮತ್ತು ಶ್ರೀರಾಮುಲು ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪನಿಯೂ ಗಣಿಗಾರಿಕೆ ಆರಂಭಿಸುವ ಕುರಿತು ವಿಚಾರಣೆ ನಡೆಸಿದ್ದ ಪೀಠ, ತೀರ್ಪನ್ನು ಮೇ 10ಕ್ಕೆ ಮುಂದೂಡಿತ್ತು. ಕರ್ನಾಟಕದ ಗಡಿ ಪ್ರದೇಶದಿಂದ 150 ದೂರದಾಚೆಗೆ ಗಣಿಗಾರಿಕೆಯನ್ನು ನಡೆಸಲು ಷರತ್ತು ಬದ್ಧ ಅನುಮತಿಯನ್ನು ನ್ಯಾಯಾಲಯ ನೀಡಿದೆ. ಗಡಿ ಒತ್ತುವರಿ ಹಾಗೂ ಅಕ್ರಮ ಗಣಿಗಾರಿಕೆ ಆರೋಪಿಸಿ ಆಂಧ್ರಪ್ರದೇಶ ಸರಕಾರದ ಒಎಂಸಿ ವಿರುದ್ಧ ಸುಪ್ರಿಂಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿತ್ತು.











Click it and Unblock the Notifications