ಜೂನ್ 9ರಿಂದ ಪಿಯುಸಿ ತರಗತಿಗಳು ಆರಂಭ

PUC Classes will commence on June 9
ಬೆಂಗಳೂರು, ಮೇ.10: ಪ್ರಥಮ ಪಿಯುಸಿಗೆ ಪ್ರವೇಶ ಅರ್ಜಿ ಪಡೆಯಲು ಮೇ.11 ಕಡೆಯ ದಿನಾಂಕವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಥಮ ಪಿಯುಸಿ ಪ್ರವೇಶ ಅರ್ಜಿಗಳನ್ನು ಪಡೆಯಲು ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಹರಸಾಹಸ ಮಾಡುತ್ತಿದ್ದಾರೆ.

ವಿಜ್ಞಾನ ಮತ್ತು ಕಲಾ ವಿಭಾಗಕ್ಕೆ ಹೋಲಿಸಿದರೆ ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಪ್ರವೇಶ ಅರ್ಜಿ ಶುಲ್ಕ ವನ್ನು ರು.15ಕ್ಕೆ ಪದವಿ ಪೂರ್ವ ಶಿಕ್ಷಣ ಮಂಡಳಿ ನಿಗದಿಪಡಿಸಿದೆ. ಪ್ರಥಮ ಪಿಯುಸಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ.14.

ಮೇ.20ರಂದು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಮೊದಲ ಪಟ್ಟಿಯನ್ನು ಕಾಲೇಜಿನ ಸೂಚನಾ ಫಲಕದಲ್ಲಿ ಶೇಕಡಾವಾರು ಅಂಕಗಳೊಂದಿಗೆ ಇಳಿಕೆ ಕ್ರಮದಲ್ಲಿ ಪ್ರಕಟಿಸಲು ಸೂಚಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳ ಮೊದಲ ಪಟ್ಟಿ ಮೇ.24ರಂದು ಪ್ರಕಟಿಸಲಾಗುತ್ತದೆ. ಮೊದಲ ಪಟ್ಟಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮೇ.27ರ ಒಳಗೆ ಪ್ರವೇಶ ಪಡೆಯ ಬೇಕು.

ಎರಡನೆ ಪಟ್ಟಿಯನ್ನು ಮೇ.29ರಂದು ಪ್ರಕಟಿಸಲಾಗುತ್ತದೆ. ಎರಡನೆ ಪಟ್ಟಿಯಲ್ಲಿ ಆಯ್ಕೆಯಾದ ವಿದ್ಯರ್ಥಿಗಳು ಪ್ರವೇಶ ಪಡೆಯಲು ಕೊನೆಯ ದಿನಾಂಕ ಜೂನ್.2. ಎಲ್ಲಾ ಪದವಿಪೂರ್ವ ಕಾಲೇಜುಗಳು ಅಂತಿಮ ಪಟ್ಟಿಯನ್ನು ಪ್ರಕಟಿಸಲು ಕೊನೆಯ ದಿನಾಂಕ ಜೂನ್.4. ಕೊನೆ ಪಟ್ಟಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಕೊನೆಯ ದಿನಾಂಕ ಜೂನ್.8. ತರಗತಿಗಳು ಜೂನ್.9ರಿಂದ ಆರಂಭವಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+