ಪಿಎಸ್ಐಯಿಂದ ಮಹಿಳೆಯ ಅತ್ಯಾಚಾರ!
ಹಾವೇರಿ,
ಮೇ. 4 : ಹಾನಗಲ್ ನ ಕುಮಾರೇಶ್ವರ ನಗರದಲ್ಲಿ ಪಿಎಸ್ಐಯೊಬ್ಬ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾಗನಲ್ ಠಾಣೆಯ ಪಿಎಸ್ಐ ಚಿದಾನಂದ ಪ್ರಕರಣದ ಆರೋಪಿಯಾಗಿದ್ದಾನೆ. id="toptextpromo">2009
ಏಪ್ರಿಲ್ 1 ರಾತ್ರಿ 8 ಗಂಟೆ ವೇಳೆಗೆ ಕುಮಾರೇಶ್ವರ ನಗರದ ಶಾಂತವ್ವ ಕೃಷ್ಣಾ ಬಂಡಿವಡ್ಡರ ಎಂಬುವವರ ಮನೆಗೆ ಅಕ್ರಮ ಪ್ರವೇಶ ಮಾಡಿದ ಚಿದಾನಂದ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ. ನಿನ್ನ ಮೇಲೆ ಕೇಸ್ ಹಾಕಿ ಕಂಬಿ ಎಣಿಸುವಂತೆ ಮಾಡುತ್ತೇನೆ ಎಂದು ಧಮಕಿ ಹಾಕಿದ. ಮಾನಭಂಗಕ್ಕೆ ಯತ್ನಿಸಿದಾಗ ಆಕೆ ಕಿರುಚಿಕೊಂಡಿದ್ದರಿಂದ ಅಕ್ಕಪಕ್ಕದ ಮನೆಯವರು ಬಂದು ಪಿಎಸ್ಐಗೆ ಧರ್ಮದೇಟು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಘಟನೆ
ನಡೆದು ಸ್ವಲ್ಪ ದಿನಗಳಾಗುತ್ತಿದ್ದಂತೆ ಆಕೆಯ ಪತಿಗೆ ಚಿದಾನಂದ ಘಟನೆ ಬಗ್ಗೆ ಯಾರ ಮುಂದೆಯೂ ಬಾಯಿ ಬಿಡಬಾರದು. ಒಂದು ವೇಳೆ ವಿಷಯ ಬಹಿರಂಗಪಡಿಸಿದರೆ, ಈ ಊರಲ್ಲಿ ಹೇಗೆ ಬದುಕುತ್ತೀರಿ ನೋಡಿ ಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲು ಹಾನಗಲ್ ಪೊಲೀಸರು ನಿರಾಕರಿಸಿದ್ದರಿಂದ ಅನ್ಯಾಯಕ್ಕೆ ಒಳಗಾದ ಮಹಿಳೆ ಕೋರ್ಟ್ ನಲ್ಲಿ ಖಾಸಗಿ ದೂರು(ಪಿಸಿ ನಂಬರ್ 37/09) ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹಾವಳಿ ಜೋರಾಗಿ ಸಾಗಿದೆ.











Click it and Unblock the Notifications