ಪ್ರಿಯಕರನಿಗಾಗಿ ಮಾಧುರಿಯಿಂದ ದೇಶದ್ರೋಹ ಕೃತ್ಯ
ಥಿಂಪು,
ಏ. 28 : ಭಾರತೀಯ ರಾಜತಾಂತ್ರಿಕ ಅಧಿಕಾರಿ ಮಾಧುರಿ ಗುಪ್ತಾ ವಿದೇಶಾಂಗ ವ್ಯವಹಾರಗಳ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನದ ಬೇಹುಗಾರಿಕೆಗೆ ನೀಡಿರುವ ಅಂಶ ಅತ್ಯಂತ ಗಂಭೀರ ಪ್ರಕರಣವಾಗಿದೆ ಎಂದು ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ ಹೇಳಿದ್ದಾರೆ. ಮಾಧುರಿ ಗುಪ್ತಾ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ನೀಡುತ್ತಿದ್ದುದು ಭಾರೀ ಮೊತ್ತದ ಹಣ ಮತ್ತು ತನ್ನ ಪ್ರಿಯಕರನಿಗಾಗಿ ಗೂಢಚಾರಿಕೆ ನಡೆಸಿದ್ದಳು ಎಂಬ ಸತ್ಯವೂ ಬಹಿರಂಗಗೊಂಡಿದೆ. id="toptextpromo">ಸಾರ್ಕ್
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಥಿಂಪುಗೆ ತೆರಳಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಇಸ್ಲಾಮಾಬಾದ್ ನಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಧುರಿ ಗುಪ್ತಾ ಅವರು ಪಾಕಿಸ್ತಾನದ ಐಎಸ್ಐ ಸಂಸ್ಥೆಗೆ ಮಾಹಿತಿ ರವಾನಿಸಿರುವ ಅಂಶ ತಿಳಿದು ಬಂದಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಬಂಧಿತ ಅಧಿಕಾರಿ ಪೊಲೀಸ್ ವಶದಲ್ಲಿದ್ದಾರೆ ಎಂದು ಕೃಷ್ಣಾ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಪಾಕ್
ರಾಜಧಾನಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮಾಧ್ಯಮ ಮತ್ತು ಮಾಹಿತಿ ವಿಭಾಗದಲ್ಲಿ ಎರಡನೇ ಹಂತದ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಮಾಧುರಿ ಕಳೆದ ಎರಡು ವರ್ಷಗಳಿಂದ ಭಾರತಕ್ಕೆ ಸಂಬಂಧಪಟ್ಟ ಗೌಪ್ಯ ರಕ್ಷಣಾ ಮಾಹಿತಿಗಳನ್ನು ಐಎಸ್‌ಐಗೆ ಹಸ್ತಾಂತರಿಸುತ್ತಿದ್ದ ಆರೋಪದ ಮೇಲೆ ಐದು ದಿನಗಳ ಹಿಂದೆಯೇ ಬಂಧನಕ್ಕೊಳಗಾಗಿದ್ದಾಳೆ.











Click it and Unblock the Notifications