ಮಹೀಂದ್ರಾ ಲೊಗಾನ್ ದರದಲ್ಲಿ ಭಾರೀ ಕಡಿತ

ಭಾರತ್ ಮೂರನೇ ಹಂತದ ಲೊಗಾನ್ ಕಾರುಗಳ ಬೆಲೆಯಲ್ಲಿ 27ರಿಂದ 80 ಸಾವಿರ ರು.ವರೆಗಿನ ದರ ಕಡಿತ ಮಾಡಲಾಗಿದ್ದು, ಭಾರತ್ ನಾಲ್ಕನೇ ಹಂತದ ಕಾರುಗಳ ಬೆಲೆಯಲ್ಲಿ 24ರಿಂದ 65 ಸಾವಿರ ರು.ವರೆಗೆ ಕಡಿತ ಮಾಡಲಾಗಿದೆ.
ಪ್ರಸ್ತುತ ಲೊಗಾನ್ ಕಾರುಗಳ ಎಂಜಿನ್ ಮತ್ತು ಟ್ರಾನ್ಸ್ ಮಿಷನ್ ಅನ್ನು ಕಂಪನಿ ಆಮದು ಮಾಡಿಕೊಳ್ಳಲಾಗುತಿದ್ದು, ನಾಸಿಕ್ ನ ಉತ್ಪಾದನಾ ಘಟಕದ ದಕ್ಷತೆ ಹೆಚ್ಚಿಸಲು ಈ ದರ ಕಡಿತ ಮಾಡಲಾಗಿದೆ ಎಂದು ಹೇಳಿದೆ. ಈ ದರ ಬದಲಾವಣೆ ಏಪ್ರಿಲ್ 26ರಿಂದ ಜಾರಿಗೆ ಬರಲಿವೆ.
ಈ ಹಿಂದೆ ಮಹೀಂದ್ರ, ರೆನಾಲ್ಟ್ ಜತೆಗೂಡಿ ಕಾರುಗಳ ದರದಲ್ಲಿ 50 ಸಾವಿರ ರು.ಗಳ ರಿಯಾಯ್ತಿ ನೀಡಿತ್ತಾದರೂ ಹೆಚ್ಚಿನ ಯಶಸ್ಸು ಸಾಧಿಸಲಾಗಲಿಲ್ಲ. ದರ ಕಡಿತದಿಂದ ಮಾರಾಟ ಹೆಚ್ಚಲಿದೆ ಎಂದು ಹೇಳಿರುವ ಮಹಿಂದ್ರ ಪ್ರಸ್ತುತ ತಿಂಗಳಿಗೆ 300ರಿಂದ 350 ಕಾರುಗಳನ್ನಷ್ಟೇ ಮಾರಾಟ ಮಾಡುತ್ತಿದೆ. ಲೊಗಾನ್ ಕಾರುಗಳಲ್ಲೇ ಉದ್ದ ಕಡಿಮೆ ಇರುವ ಕಾರುಗಳನ್ನು ತಯಾರಿಸಲು ಯೋಜನೆ ಹಾಕಿಕೊಂಡಿದ್ದು ಅವು 18 ತಿಂಗಳ ನಂತರ ಮಾರುಕಟ್ಟೆಗೆ ಬಿಡುಗಡೆ ಆಗಲಿವೆ. ಫ್ರಾನ್ಸ್ ನ ರೆನಾಲ್ಟ್ ನ ಜತೆ ಲೊಗಾನ್ ನ ಇತರ ಮಾದರಿಯ ಕಾರುಗಳನ್ನು ತಯಾರಿಸಲೂ ಮಾತುಕತೆ ನಡೆಸಿದೆ.












Click it and Unblock the Notifications