ಜಂಟಿ ಸದನ ಸಮಿತಿ ಕೈಗೆ ಐಪಿಎಲ್ ಭೂತ
ನವದೆಹಲಿ,
ಏ. 23 : ಐಪಿಎಲ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಂದು ಕೂಡ ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದು, ಐಪಿಎಲ್ ನ ಅಷ್ಟೂ ವ್ಯವಹಾರವನ್ನು ಜಂಟಿ ಸದನ ಸಮಿತಿಯ ತನಿಖೆಗೆ ವಹಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. id="toptextpromo">ಲೋಕಸಭೆ
ಆರಂಭವಾಗುತ್ತಿದ್ದಂತೆಯೇ ನೇರವಾಗಿ ಐಪಿಎಲ್ ವಿವಾದವನ್ನು ಕೈಗೆತ್ತಿಕೊಂಡ ಪ್ರತಿಪಕ್ಷಗಳು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದವು. ಕೇಂದ್ರ ಸರಕಾರದ ಇಬ್ಬರು ಮಂತ್ರಿಗಳು ಐಪಿಎಲ್ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಅವರ ಮೇಲೂ ಈ ಆರೋಪ ಬಂದಿದೆ. ಹೀಗಾಗಿ ಪ್ರಕರಣವನ್ನು ಜಂಟಿ ಸದನ ಸಮಿತಿಯ ತನಿಖೆಗೆ ವಹಿಸಬೇಕು ಎಂದು ವಿರೋಧಪಕ್ಷಗಳು ಪಟ್ಟು ಹಿಡಿದವು. id='are-slot-1' class='oiad oi-axt oiadv'> id='top-searched-articles'>ಪ್ರತಿಪಕ್ಷಗಳ
ಒತ್ತಾಯಕ್ಕೆ ಮಣಿದ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು, ಪ್ರತಿ ಸದಸ್ಯರ ಭಾವನೆಗಳು ಅರ್ಥವಾಗಿವೆ. ಕ್ರೀಡೆಯಲ್ಲಿ ಅವ್ಯವಹಾರ ಸಲ್ಲದು. ಹೀಗಾಗಿ ಐಪಿಎಲ್ ಅವ್ಯವಹಾರವನ್ನು ಜಂಟಿ ಸದನ ಸಮಿತಿಯ ತನಿಖೆಗೆ ವಹಿಸಲು ಸರಕಾರ ಚಿಂತನೆ ನಡೆಸಲಿದೆ. ಈ ಬಗ್ಗೆ ಪ್ರಧಾನಮಂತ್ರಿಯವರಿಗೆ ಸಂಪೂರ್ಣ ವಿವರ ನೀಡುವುದಾಗಿ ಅವರು ಹೇಳಿದರು.











Click it and Unblock the Notifications