ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸೆಲ್ಸಿ ಬಾಲಕನ ಹೋರಾಟಕ್ಕೆ ಸಂದ ಜಯ!

By Shami
|
Google Oneindia Kannada News

HC comes to class X student rescue
ಚೆನ್ನೈ, ಏ.21: ಮೌಲ್ಯಮಾಪಕರ ದೋಷದಿಂದ ಲ್ಯಾಪ್ ಟಾಪ್ ಪಡೆಯುವಲ್ಲಿ ವಂಚಿತನಾಗಿದ್ದ ಹತ್ತನೇ ತರಗತಿ ಬಾಲಕನಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಪ್ರತಿಭಾವಂತ ವಿದ್ಯಾರ್ಥಿಗಳ ಅನುದಾನ ಯೋಜನೆಯ ಅನ್ವಯ ಬಾಲಕನಿಗೆ ಲ್ಯಾಪ್ ಟಾಪ್ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೊರ್ಟ್ ಬುಧವಾರ(ಏ.21) ದಂದು ಸೂಚಿಸಿದೆ.

ನಾಗಪಟ್ಟಿಣಂ ಜಿಲ್ಲೆಯ ನಿವಾಸಿಯಾದ ಆರ್ ರವೀಂದ್ರನ್ ಅವರು ಗಣಿತ ವಿಷಯದಲ್ಲಿ 94 ಅಂಕಗಳನ್ನು ಗಳಿಸಿದ್ದರು. ಮರು ಮೌಲ್ಯಮಾಪನದ ನಂತರ 97 ಅಂಕಕ್ಕೆ ಏರಿತು.ಇದರಿಂದ ಒಟ್ಟು ಮೊತ್ತ 500ಕ್ಕೆ 478 ಆಯಿತು. ಈ ಕಾರಣದಿಂದ ಲ್ಯಾಪ್ ಟಾಪ್ ಪಡೆಯಲು ಅರ್ಹನಾದರೂ ರವೀಂದ್ರನ್ ಅವರು ಅವಕಾಶ ವಂಚಿತರಾದರು.ನಾಗಪಟ್ಟಿಣಂ ಜಿಲ್ಲೆಯಲ್ಲು 465 ಅಂಕ ಗಳಿಸಿದ್ದ 35 ವಿದ್ಯಾರ್ಥಿಗಳಿಗೆ ಸರ್ಕಾರದ ಯೋಜನೆಯನ್ವಯ ಲ್ಯಾಪ್ ಟಾಪ್ ಹಂಚಲಾಗಿದೆ.

ಅರ್ಜಿದಾರರು ಪ್ರತಿಭಾವಂತವಿದ್ಯಾರ್ಥಿಯಾಗಿದ್ದು, ಸರ್ಕಾರದ ತನ್ನ ತಪ್ಪನ್ನು ಸರಿಪಡಿಸಿಕೊಂಡು ಕೂಡಲೇ ಲ್ಯಾಪ್ ಟಾಪ್ ಹಂಚಬೇಕು ಪರೀಕ್ಷಾ ಮೇಲ್ವಿಚಾರಕರ ಉಪೇಕ್ಷೆಯಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ ಎಂಥಾ ಅನ್ಯಾಯವಾಗುತ್ತದೆ ಎಂಬುದಕ್ಕೆ ಈ ಮೊಕದ್ದಮೆ ಜ್ವಲಂತ ನಿದರ್ಶನವಾಗಿದೆ ಎಂದು ನ್ಯಾಯಾಧೀಶ ಎನ್ ಪೌಲ್ ವಸಂತ್ ಕುಮಾರ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಗಣಿತ ವಿಷಯದಲ್ಲಿ ಶೇ.96.5 ಅಂಕಗಳನ್ನು ಗಳಿಸಿರುವ ಈ ವಿದ್ಯಾರ್ಥಿಯ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಸರ್ಕಾರದ ಯೋಜನೆಯಂತೆ ಲ್ಯಾಪ್ ಟಾಪ್ ನ್ಯಾಯಯುತವಾಗಿ ಸಲ್ಲಬೇಕು. ಈ ರೀತಿ ತಪ್ಪುಗಳಿಂದ ವಿದ್ಯಾರ್ಥಿಗಳು ಮುಜುಗರಕ್ಕೀಡಾಬೇಕಾಗುತ್ತದೆ. ಇನ್ಮುಂದೆ ಈ ರೀತಿ ತಪ್ಪುಗಳಾಗದಂತೆ ಪರೀಕ್ಷಾ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ನಿಗಾ ವಹಿಸಬೇಕು ಎಂದು ನ್ಯಾಯಾಧೀಶರು ಎಚ್ಚರಿಕೆಯ ಮಾತುಗಳನ್ನಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X