ಮಳೆ ಅವಘಡಕ್ಕೆ 24/7 ನಿಯಂತ್ರಣ ಕೊಠಡಿ

ಮಳೆ ಬಂದರೆ ಬೆಂಗಳೂರು ಬೆಂಗಳೂರಾಗಿರುವುದಿಲ್ಲ ಎನ್ನುವ ಸಂಗತಿ ಅನೇಕ ವರ್ಷಗಳಿಂದ ಮನದಟ್ಟಾಗಿದೆ. ಕೆರೆ ನೀರು ಹರವಿನ ಜಾಗಗಳಲ್ಲಿ ಕಟ್ಟಡಗಳು ಎದ್ದಿರುವುದು, ಮಳೆ ನೀರು ಸಾಗಿಸುವ ಕಾಲುವೆಗಳಲ್ಲಿ ಕಸ ತುಂಬಿರುವುದು, ನೀರಿನ ರಭಸ ತಡೆಯದ ಸಣ್ಣಸಣ್ಣ ಚರಂಡಿಗಳು ಬೆಂಗಳೂರಿನ ಶತೃಗಳು. ಇದನ್ನು ಮನಗಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಈ ಬಾರಿ ಮಳೆ ಹಾವಳಿಯಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಕೆಲವು ಕ್ರಮಗಳನ್ನು ಕೈಗೊಂಡಿದೆ.
ನಗರ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆ ಸಂಭವಿಸಿದಾಗ ಪ್ರವಾಹ, ನೀರು ನುಗ್ಗುವುದು ಮುಂತಾದ ಮಳೆ ಸಂಬಂಧಿತ ಅವಗಢಗಳು ಸಂಭವಿಸಿದಾಗ ಸಾರ್ವಜನಿಕರಿಗೆ ನೇರವಾಗಿ ನೆರವಾಗಲು ಮತ್ತು ಬಿಬಿಎಂಪಿ ಸಿಬ್ಬಂದಿಗೆ ಸಹಾಯ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ನಾಲ್ಕು ವಿಭಾಗೀಯ ಕಚೇರಿಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ಸ್ಥಾಪಿಸಿದೆ.
ಈ ಕೊಠಡಿಯ ನಿರ್ವಹಣೆಯನ್ನು ಅಭಿಯಂತರ ಅಧಿಕಾರಿಗಳಿಗೆ ವಹಿಸಲಾಗಿದೆ. ಪ್ರತಿದಿನವೂ ಅಧಿಕಾರಿಯೊಬ್ಬರು ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಪ್ರಾಧಿಕಾರದ ವ್ಯಾಪ್ತಿಯ ಪ್ರದೇಶಗಳಲ್ಲಿ ಹಾನಿಯಾಗಿದ್ದರೆ ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ, ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಸಿಬ್ಬಂದಿಗಳೊಡನೆ ಸಂಪರ್ಕವಿರಿಸಿಕೊಂಡು ಅಗತ್ಯವಾದ ಕೊಠಡಿಗಳನ್ನು ಸಜ್ಜುಗೊಳಿಸಿದೆ.
ಪ್ರತಿಯೊಂದು ನಿಯಂತ್ರಣ ಕೊಠಡಿಗೆ ತಲಾ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಹತ್ತು ಜನ ಸಿಬ್ಬಂದಿ, ಒಂದು ಜೆಸಿಬಿ, ಒಂದು ಟ್ರಾಕ್ಟರ್, ಒಂದು ಡಿಸೇಲ್ ಪಂಪ್ ಸೆಟ್ ಹಾಗೂ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಸಾಮಾಗ್ರಿಗಳನ್ನು ನೀಡಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದ್ದು, ಅಂಥ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂಥ ಕಾಮಗಾರಿಗಳನ್ನು ಭರದಿಂದ ಕೈಗೆತ್ತಿಕೊಳ್ಳಲು ಆಯುಕ್ತರು ಸೂಚಿಸಿದ್ದಾರೆ.
ನಿಯಂತ್ರಣ ಕೊಠಡಿಗಳ ಉಸ್ತುವಾರಿ ಅಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳ ಹಾಗೂ ಅವರುಗಳ ದೂರವಾಣಿ ಸಂಖ್ಯೆ ಕೆಳಗಿನಂತಿದೆ.
ಪೂರ್ವ ವಿಭಾಗ
ರಾಘವನ್, ಅಭಿಯಂತರ ಅಧಿಕಾರಿ, 98456 30128
ರಾಜಶೇಖರ್, ಕಾರ್ಯಪಾಲಕ ಅಭಿಯಂತರರು, 98807 30449, 080-25720264 (ಕಚೇರಿ)
ಪಶ್ಚಿಮ ವಿಭಾಗ
ಸಂಜೀವ ವಿ ಮರಡ್ಡಿ, ಅಭಿಯಂತರ ಅಧಿಕಾರಿ, 98456 30116
ಸಿದ್ಧರಾಜು, ಕಾರ್ಯಪಾಲಕ ಅಭಿಯಂತರು, 98456 30111, 080-23381479(ಕಚೇರಿ)
ಉತ್ತರ ವಿಭಾಗ
ಎ ಎನ್ ತ್ಯಾಗರಾಜ್, ಅಭಿಯಂತರ ಅಧಿಕಾರಿ, 98456 30115
ಸುಬ್ರಮಣ್ಯ, ಕಾರ್ಯಪಾಲಕ ಅಭಿಯಂತರರು, 99456 04475, 080-23333479(ಕಚೇರಿ)
ದಕ್ಷಿಣ ವಿಭಾಗ
ಎ ಎನ್ ತ್ಯಾಗರಾಜ್, ಅಭಿಯಂತರ ಅಧಿಕಾರಿ, 98456 30115
ಶ್ರೀನಿವಾಸ್ ರಾವ್, ಕಾರ್ಯಪಾಲಕ ಅಭಿಯಂತರರು, 99456 04475, 080-26712949 (ಕಚೇರಿ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications