ಜೆಪಿನಗರ : ಕೆನರಾ ಬ್ಯಾಂಕ್ ಎಟಿಎಂ ಲೂಟಿ
ಬೆಂಗಳೂರು,
ಏ. 20 : ಹಣ ಕಳವು ಮಾಡುವ ಸಲುವಾಗಿ ಎರಡು ದಿನಗಳ ಕಾಲ ಬ್ಯಾಂಕ್ ನಲ್ಲೇ ಉಳಿದುಕೊಂಡಿದ್ದ ಕಳ್ಳರು ಎಟಿಎಂ ಯಂತ್ರವನ್ನು ಜಖಂಗೊಳಿಸಿ ಸುಮಾರು 14.40 ಲಕ್ಷ ರುಪಾಯಿಗಳನ್ನು ದೋಟಿಕೊಂಡು ಪರಾರಿಯಾಗಿರುವ ಸಿನಿಮೀಯ ಘಟನೆ ಜೆಪಿ ನಗರದ ಒಂದನೇ ಹಂತದಲ್ಲಿ ನಡೆದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. id="toptextpromo"> ಜೆಪಿ ನಗರದ ಸಂಗಮ್ ವೃತ್ತದ ಬಳಿ ಇರುವ ಕೆನರಾ ಬ್ಯಾಂಕ್ ನ ಸಾರಕ್ಕಿ ಶಾಖೆಯ ಎಟಿಎಂ ಘಟಕದಲ್ಲಿ ಕಳವು ಮಾಡಿದ್ದಾರೆ. ಶನಿವಾರ ಕೆಲಸ ಮುಗಿದ ನಂತರ ಬ್ಯಾಂಕ್ ನ ಸಿಬ್ಬಂದಿ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ಸಿಬ್ಬಂದಿ ಸೋಮವಾರ ಬೆಳಗ್ಗೆ ಕಚೇರಿಗೆ ಬಂದಾಗ ಕಳವು ನಡೆದಿರುವುದು ಗೊತ್ತಾಗಿದೆ. ಬ್ಯಾಂಕ್ ಕಟ್ಟಡಕ್ಕೆ ಹೊಂದಿಕೊಂಡಂತೆಯೇ ಈ ಎಟಿಎಂ ಘಟಕವಿದೆ. ಎಟಿಎಂ ಕೊಠಡಿಯ ಬಾಗಿಲು ಬೀಗ ನಕಲು ಮಾಡಿಸಿಕೊಂಡು ಹಣ ದೋಚಲಾಗಿದೆ ಎಂದು ಪೊಲೀಸರು ಅನುಮಾನಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಘಟನೆಗೆ ಸಂಬಂಧಿಸಿದಂತೆ ಬ್ಯಾಂಕ್ ನ ಹಿರಿಯ ವ್ಯವಸ್ಥಾಪಕ ಕೆ ಜಿ ಲಕ್ಷ್ಮಿನಾರಾಯಣ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಬ್ಯಾಂಕ್ ಹಾಗೂ ಅದರ ಎಟಿಎಂ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಅಲ್ಲದೆ, ಬ್ಯಾಂಕ್ ಗೆ ಕಾವಲು ನೇಮಿಸಿಲ್ಲ. ಇದರಿಂದಾಗಿ ಹಣ ದೋಚಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.











Click it and Unblock the Notifications