ಅರ್ಜುನ ,ಧ್ಯಾನ್‌ಚಂದ್ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

Arjuna Award
ಬೆಂಗಳೂರು, ಏ.20: ಭಾರತ ಸರ್ಕಾರದ ಯುವಜನ ಸೇವಾ ಹಾಗೂ ಕ್ರೀಡಾ ಸಚಿವಾಲಯವು 2010ನೇ ಸಾಲಿನಲ್ಲಿ ನೀಡಲಿರುವ ಪ್ರತಿಷ್ಠಿತ ಅರ್ಜುನ ಹಾಗೂ ಧ್ಯಾನ್‌ಚಂದ್ ಪ್ರಶಸ್ತಿಗಳಿಗೆ ಅಸಾಧರಣ ಸಾಧನೆಗೈದ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಿದೆ.

ಪ್ರಶಸ್ತಿ ನೀಡಲಾಗುವ ವರ್ಷದಲ್ಲಿ ಹಾಗೂ ಹಿಂದಿನ ಮೂರು ವರ್ಷಗಳಲ್ಲಿ ಸತತವಾಗಿ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಪರಿಗಣಿಸಲಾಗುವುದು ಹಾಗೂ ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಟ್ಟದ ಅಂದರೆ ಒಲಂಪಿಕ್ಸ್, ಕಾಮನ್‌ವೆಲ್ತ್ ಹಾಗೂ ವಿಶ್ವ ಕಪ್ ಚಾಂಪಿಯನ್‌ಶಿಪ್ ಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಧ್ಯಾನ್‌ಚಂದ್ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆ ಯಲ್ಲಿ ಹೇಳಲಾಗಿದೆ.

ಅಲ್ಲದೆ, ಪ್ರಶಸ್ತಿ ನೀಡುವ ವರ್ಷ ಹಾಗೂ ಹಿಂದಿನ ಮೂರು ವರ್ಷಗಳಸಾಧನೆಯನ್ನು ಹಾಗು ಯಾವುದೇ ಕ್ರೀಡಾಪಟು ನಿವೃತ್ತಿ ಹೊಂದಿದ್ದು, ಕ್ರೀಡೆಯ ಬಗ್ಗೆ ಪ್ರೋತ್ಸಾಹಕ ಗುಣಗಳನ್ನು ಹೊಂದಿದ್ದು ಪ್ರಸ್ತುತ ಕ್ರೀಡೆಯಲ್ಲಿ ಸಕ್ರಿಯವಾಗಿರುವವರ ಜೀವಮಾನದ ಸಾಧನೆಗೆ ಧ್ಯಾನ್‌ಚಂದ್ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಅರ್ಹ ಕ್ರೀಡಾಪಟುಗಳು ನಿಗದಿತ ಅರ್ಜಿ ನಮೂನೆಯಲ್ಲಿ ತಮ್ಮ ಸಾಧನೆ ವಿವರಗಳನ್ನು ದಾಖಲೆಗಳ ಸಹಿತ ಮೂರು ಪ್ರತಿಗಳಲ್ಲಿ (ಅರ್ಜುನ ಪ್ರಶಸ್ತಿಗೆ) ಹಾಗೂ ನಾಲ್ಕು ಪ್ರತಿಗಳಲ್ಲಿ (ಧ್ಯಾನ್‌ಚಂದ್ ಪ್ರಶಸ್ತಿಗೆ)ಕಳಿಸಬೇಕು. ನಿಗದಿತ ಅರ್ಜಿ ನಮೂನೆಯನ್ನು ಕೆಳಗೆ ಕೊಟ್ಟಿರುವ ಕಛೇರಿಯಲ್ಲಿ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
26/04/2010
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಸಹಾಯಕ ನಿರ್ದೇಶಕರ ಕಛೇರಿ,
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ,
ಬೆಂಗಳೂರು ನಗರ ಜಿಲ್ಲೆ,
ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು,

ಹೆಚ್ಚಿನ ವಿವರಗಳಿಗೆ ಕಛೇರಿ ದೂರವಾಣಿ ಸಂಖ್ಯೆ (080) 22239771 ನ್ನು ಸಂರ್ಪಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+