ಅಧಿಕಾರಿಗಳ ಕೈಲಿ ಟಪಾಲ್ ದಾಖಲೆ ಪತ್ರ

ಸರ್ವೇ ಆಫ್ ಇಂಡಿಯಾದ ಎ.ಕೆ. ಪಾದ ಮತ್ತು ಎಂ.ಎನ್. ಮಿಶ್ರಾ ನೇತೃತ್ವದ ತಂಡ, ಓಎಂಸಿ, ಎಂಎಂಸಿ 2 ಗಣಿಗಳಿಗೆ ಭೇಟಿ ನೀಡಿ 1ರಿಂದ 12 ರ ವರೆಗಿನ ಸರ್ವೇ ಪಾಯಿಂಟ್‌ಗಳನ್ನು ಗುರುತಿಸಿದ್ದಾರೆ. ಅಲ್ಲದೇ, ಎಜಿಕೆ ಗಣಿ ಪ್ರದೇಶದಲ್ಲಿ ಟ್ರೈಪ್ಯಾಡ್ ಅನ್ನು ಫಿಕ್ಸ್ ಮಾಡಿ ಓಎಂಸಿ ಗಣಿ ಪ್ರದೇಶದಲ್ಲಿ ರೆಫರೆನ್ಸ್ ಪಾಯಿಂಟ್ ಅನ್ನು ಗುರುತಿಸಿ, ಖಚಿತ ಮಾಡಿದ್ದಾರೆ.
ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ಕರ್ನಾಟಕ - ಆಂಧ್ರದ ಗಡಿಯಲ್ಲಿಯ ವಿವಾದಿತ ಗಡಿ - ಗಣಿ ಒತ್ತುವರಿಯ ಆರೋಪದ ಆರು ಗಣಿಗಳ ಸರ್ವೇ ಕಾರ್ಯ ನಡೆದಿದೆ. ಗಣಿ ಉದ್ಯಮಿ ಟಪಾಲ್ ಗಣೇಶ್ , ಸರ್ವೆಗೆ ಸಂಬಂಧಿಸಿದ ಕೆಲ ಕಾಗದ ಪತ್ರಗಳನ್ನು ಸರ್ವೇ ಅಧಿಕಾರಿಗಳಿಗೆ ನೀಡಿದರು.
ಅಕ್ರಮ ಗಣಿಗಾರಿಕೆ ಕುರಿತಂತೆ ಸರ್ವೆ ಮುಂದುವರೆದಿದ್ದು, ಜಂಟಿ ಸಮೀಕ್ಷಾ ಸಮಿತಿ ಹೊಸಪೇಟೆ ಹಾಗೂ ಸಂಡೂರು ಭಾಗದ ಐದು ಗಣಿಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಭಾರತೀಯ ಗಣಿ ಪ್ರಾಧಿಕಾರ(ಐಬಿಎಂ) ಮತ್ತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications