ಜಿಎಸ್ಎಲ್ ವಿ-ಡಿ3 ಉಡಾವಣೆ ವಿಫಲ

GSLV D3 launch fails
ಶ್ರೀಹರಿಕೋಟ, ಏ. 15 : ಭಾರತದ ಮಹತ್ವಾಕಾಂಕ್ಷೆಯ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಉಪಗ್ರಹ ಜಿಎಸ್ಎಲ್ ವಿ-ಡಿ3ಯ ಉಡಾವಣೆ ವಿಫಲವಾಗಿದೆ. ಇದರಿಂದಾಗಿ ಇಸ್ರೋದ ಈ ಯತ್ನಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ.

ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಅತ್ಯಾಧುನಿಕ ಜಿಸ್ಯಾಟ್ 4 ಉಪಗ್ರಹ ಗಗನಕ್ಕೆ ಚಿಮ್ಮಿ ಮೂರನೇ ಹಂತದಲ್ಲಿ ತನ್ನ ಕಕ್ಷೆ ಬದಲಿಸಿ ಬೇರೆ ದಿಕ್ಕಿನತ್ತ ಚಲಿಸಿತು. ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಇಂಜಿನ್ ವಿಫಲಗೊಂಡಿದ್ದರಿಂದ ಭಾರತೀಯ ಬಾಹ್ಯಾಕಾಶ ಯೋಜನೆಗೆ ಹಿನ್ನೆಡೆಯುಂಟಾಗಿದೆ.

ಇಂಜಿನ್ ಯಾಕೆ ವಿಫಲವಾಯಿತೆಂದು ಇಸ್ರೋದ ವಿಜ್ಞಾನಿಗಳು ಕಾರಣ ಹುಡುಕುತ್ತಿದ್ದಾರೆ. 330 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕ್ರಯೋಜೆನಿಕ್ ಇಂಜಿನ್ ತಂತ್ರಜ್ಞಾನದ ಬಗ್ಗೆ ಇಸ್ರೋ ವಿಜ್ಞಾನಿಗಳು ಆಶಾಭಾವನೆ ಹೊಂದಿದ್ದರು. ಗಗನಕ್ಕೆ ಚಿಮ್ಮಿದಾಗ ಭಾರೀ ಹರ್ಷ ವ್ಯಕ್ತವಾಗಿತ್ತು. ಆದರೆ, ಕೆಲವೇ ಕ್ಷಣಗಳಲ್ಲಿ ಕಾರ್ಮೋಡ ಕವಿದಂತಾಗಿದೆ.

ಉಡಾವಣೆಗೊಂಡ ಕೆಲವೇ ಸೆಕೆಂಡುಗಳ ನಂತರ ಇಂಜಿನ್ನಿನ ಕಾರ್ಯನಿರ್ವಹಣೆಯಲ್ಲಿ ದೋಷ ಬಂದ ಕಾರಣ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ನಂತರ ಸಮುದ್ರಕ್ಕೆ ಉಪಗ್ರಹ ಬಿದ್ದಿದೆ. ಆದರೆ, ಇನ್ನೊಂದು ವರ್ಷದಲ್ಲಿ ಸ್ವದೇಶಿ ನಿರ್ಮಾಣದ ಉಪಗ್ರಹವನ್ನು ಮತ್ತೆ ನಭ ಉಡಾಯಿಸುವುದಾಗಿ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+