ರೇಣುಕಾಚಾರ್ಯ ಜಯಲಕ್ಷ್ಮಿ ರಾಜಿ!
ಬೆಂಗಳೂರು,
ಏ. 13 : ಅಬಕಾರಿ ಸಚಿವ ಎಂ ಪಿ ರೇಣುಕಾಚಾರ್ಯ ಹಾಗೂ ಜಯಲಕ್ಷ್ಮಿ ನಡುವೆ ಸ್ವಾಮೀಜಿಯೊಬ್ಬರ ಮಧ್ಯೆಸ್ಥಿಕೆಯಿಂದಾಗಿ ರಾಜಿ ಸಂಧಾನ ಏರ್ಪಟ್ಟಿದೆ. ರಾಜಿ ಸಂಧಾನ ಯಶಸ್ವಿಯಾಗಿದ್ದರಿಂದ ರೇಣುಕಾಚಾರ್ಯ ವಿರುದ್ಧ ಜಯಲಕ್ಷ್ಮಿ ಹೂಡಿದ್ದ ಜೀವಬೆದರಿಕೆ ಪ್ರಕರಣವನ್ನು ವಾಪಸ್ ಪಡೆದಿದ್ದಾರೆ. id="toptextpromo"> ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 8ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಸಚಿವ ರೇಣುಕಾಚಾರ್ಯ ಹಾಗೂ ನರ್ಸ್ ಜಯಲಕ್ಷ್ಮಿ ಹಾಜರಾದದರೂ ಇಬ್ಬರು ರಾಜಿಯಾಗಿರುವ ಬಗ್ಗೆ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಜಯಲಕ್ಷ್ಮಿ ರೇಣುಕಾಚಾರ್ಯ ವಿರುದ್ಧ ಹೂಡಲಾಗಿದ್ದ ಪ್ರಕರಣ ವಾಪಸ್ ಪಡೆದಿದ್ದರಿಂದ ನಾಲ್ಕು ವರ್ಷಗಳಿಂದ ಸಾಕಷ್ಟು ಕುತೂಹಲ ಕೆರಳಿಸಿದ್ದ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿತು. id='are-slot-1' class='oiad oi-axt oiadv'> id='top-searched-articles'> ರಾಜಿ ಸಂಧಾನ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಯಲಕ್ಷ್ಮಿ, ಹಿರಿಯ ಸ್ವಾಮೀಜಿಯೊಬ್ಬರ ಮಧ್ಯೆಸ್ಥಿಕೆಯಲ್ಲಿ ರಾಜಿ ಸಂಧಾನವಾಗಿದೆ. ಹಿರಿಯರ ಮಾತಿಗೆ ಗೌರವ ನೀಡಿ ಹಳೆಯದನ್ನು ಮರೆತಿದ್ದೇನೆ ಎಂದು ಹೇಳಿದರು.











Click it and Unblock the Notifications