ಸಾನಿಯಾ ಮಿರ್ಜಾ ಪಾಕ್ ಪರ ಆಡಬೇಕು !
ಕರಾಚಿ,
ಏ. 1 : ಪಾಕ್ ಕ್ರಿಕೆಟಿಗ ಶೋಯಿಬ್ ಮಲಿಕ್ ಅವರನ್ನು ವರಿಸಿದ ನಂತರ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಬೇಕೆಂದು ಪಾಕಿಸ್ತಾನ ಟೆನಿಸ್ ಫೆಡರೇಶನ್ ಅಧ್ಯಕ್ಷ ದಿಲವಾರ್ ಅಬ್ಬಾಸ್ ಹೇಳಿಕೆ ನೀಡಿದ್ದಾರೆ. id="toptextpromo">ಸಾನಿಯಾ
ಪಾಕ್ ಆಟಗಾರನೊಬ್ಬನ್ನನ್ನು ಮದುವೆಯಾಗುತ್ತಿರುವುದು ನಮಗೆ ಸಂತಸದ ವಿಷಯ. ನಾವು ಸಾನಿಯಾ ಅವರನ್ನು ಸ್ವಾಗತಿಸುತ್ತೇವೆ ಮತ್ತು ಭವಿಷ್ಯದಲ್ಲಿ ಆಕೆ ಪಾಕಿಸ್ತಾನದ ಪ್ರಜೆಯಾಗಿರಬೇಕೆಂದು ಬಯಸುತ್ತೇವೆ. ಆಕೆಗೆ ಉಜ್ವಲ ಭವಿಷ್ಯವಿದೆ ಮತ್ತು ಆಕೆ ಪಾಕ್ ಪರ ಆಡಿದರೆ ನಮಗೆ ಅದು ತುಂಬಾ ಸಂತೋಷದ ವಿಷಯ ಎಂದು ಪ್ರಮುಖ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಬ್ಬಾಸ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಒಂದು
ವೇಳೆ ಸಾನಿಯಾ ಭಾರತದ ಪರ ಆಡಬೇಕೆಂದು ಬಯಸಿದರೆ, ಆಕೆ ನಮ್ಮ ದೇಶದಲ್ಲಿರುವ ಪ್ರತಿಭೆಗಳಿಗೆ ತರಬೇತಿ ನೀಡಲಿ. ಅಂತಾರಾಷ್ಟ್ರೀಯ ಮಟ್ಟದ ಮಿಶ್ರ ಡಬಲ್ಸ್ ಟೂರ್ನಿಯಲ್ಲಿ ಪಾಕ್ ಆಟಗಾರ ಐಸಾಮ್ - ಉಲ್ - ಹಕ್ ಜೊತೆ ಆಡಬೇಕೆಂದು ನಮ್ಮ ಅಪೇಕ್ಷೆ. ಈ ಇಬ್ಬರು ಉದಯೋನ್ಮುಖ ಆಟಗಾರರು ಜೊತೆಯಾಗಿ ಆಡಿದರೆ ಟೆನಿಸ್ ನಲ್ಲಿ ಹೆಚ್ಚಿನ ಸಾಧನೆ ತೋರಬಹುದು ಮತ್ತು ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ಕೂಡ ಸುಧಾರಿಸಬಹುದು ಎಂದು ಅಬ್ಬಾಸ್ ಅಭಿಪ್ರಾಯ ಪಟ್ಟಿದ್ದಾರೆ.











Click it and Unblock the Notifications