ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಬಸ್ಸಲ್ಲಿ ರಸ್ತೆ ಮಾರ್ಗದರ್ಶಿ ಜಿಪಿಎಸ್

By Prasad
|
Google Oneindia Kannada News

KSRTC to intoduce GPS in Mysuru buses
ಮೈಸೂರು, ಮಾ. 31 : ಜಿಪಿಎಸ್ (ಗ್ಲೋಬಲ್ ಪೋಸಿಶನಿಂಗ್ ಸಿಸ್ಟಂ) ಎಂಬ ರಸ್ತೆ ಮಾರ್ಗದರ್ಶಿ ಎಲೆಕ್ಟ್ರಾನಿಕ್ ಉಪಕರಣವನ್ನು ಪ್ರಪ್ರಥಮ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ಬಸ್ ಗಳಲ್ಲಿ ಅಳವಡಿಸುವ ಯೋಜನೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಕಿಕೊಂಡಿದೆ.

ನಗರದಲ್ಲಿರುವ ಬಸ್ ನಿಲ್ದಾಣಗಳ ವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಈ ಸುದ್ದಿಯನ್ನು ಸಾರಿಗೆ ಸಚಿವ ಆರ್ ಅಶೋಕ್ ಹಂಚಿಕೊಂಡರು. ಈ ಯೋಜನೆಗಾಗಿ ವಿಶ್ವ ಬ್ಯಾಂಕ್ 21 ಕೋಟಿ ರು. ಹಣಕಾಸನ್ನು ಒದಗಿಸಲಿದೆ ಎಂದು ಅವರು ತಿಳಿಸಿದರು.

ಜೆಎನ್ ನರ್ಮ್ ಯೋಜನೆಯಲ್ಲಿ ನೀಡಲಾಗಿದ್ದ ಹಣವನ್ನು ರಾಜ್ಯ ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಂಡಿದೆ. ರಾಜ್ಯದ ಸಾರಿಗೆಯನ್ನು ಮಾದರಿಯಾಗಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕೆಂದು ಕೇಂದ್ರ ಸರಕಾರ ಕೂಡ ಇತರ ರಾಜ್ಯಗಳಿಗೆ ಹೇಳಿದೆ. ರಾಜಸ್ತಾನ ಸರಕಾರ ರಾಜ್ಯದ ಸಾರಿಗೆ ಅಧಿಕಾರಿಗಳನ್ನು ತನ್ನ ರಾಜ್ಯಕ್ಕೆ ಆಹ್ವಾನಿಸಿದೆ ಎಂದು ಅವರು ಹೇಳಿದರು.

ಜಿಪಿಎಸ್ ಎಂಬ ರಸ್ತೆ ಮಾತುಗಾರನ ಬಗ್ಗೆ ಇನ್ನಷ್ಟು ತಿಳಿಯಿರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X