ಯೋಗ ಗುರುವಿನಿಂದ ಹೊಸ ಪಕ್ಷ ಘೋಷಣೆ

ಮೊದಲೇ ತಿಳಿಸಿದ್ದಂತೆ ಭಾರತ್ ಸ್ವಾಭಿಮಾನ್ ಪಕ್ಷದಿಂದ ದೇಶದ ಎಲ್ಲ 545 ಲೋಕಸಭಾ ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪ್ರಕಟಿಸಿರುವ ಅವರು, ತಾವು ಮಾತ್ರ ಯಾವುದೇ ಹುದ್ದೆ ಅಲಂಕರಿಸುವುದಾಗಲೀ, ಚುನಾವಣೆಗೆ ಸ್ಪರ್ಧಿಸುವುದಾಗಲೀ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷ ಬಲವರ್ದನೆ : ದೇಶದ ಪ್ರತೀ ಸಂಸದೀಯ ಕ್ಷೇತ್ರಗಳಲ್ಲೂ 7ರಿಂದ 10 ಲಕ್ಷ ಸದಸ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ರಾಮ್‌ದೇವ್ ಸಂಕಲ್ಪ ಮಾಡಿದ್ದಾರೆ. ಈ ಸದಸ್ಯರೇ ನಿರ್ದಿಷ್ಟ ಕ್ಷೇತ್ರದಿಂದ ಸಂಸತ್ತಿಗೆ ಯಾರನ್ನು ಆರಿಸಬೇಕೆಂಬುದನ್ನು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಸೂಪರ್ ಪವರ್: ವಿದೇಶಿ ಬ್ಯಾಂಕ್ ಖಾತೆಗಳಲ್ಲಿರುವ ಭಾರತೀಯರ ಕೋಟ್ಯಂತರ ರೂ.ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರಲು ಸಾಧ್ಯವಾದಲ್ಲಿ ಭಾರತ ಸೂಪರ್ ಪವರ್ ಆಗಿ ಹೊರ ಹೊಮ್ಮಲಿದೆ ಎಂದು ರಾಮ್‌ದೇವ್ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.












Click it and Unblock the Notifications