ನಿತ್ಯಾನಂದನ ಲೀಲೆ ಪ್ರಸಾರಕ್ಕೆ ಕೊಕ್ಕೆ
ಬೆಂಗಳೂರು,
ಮಾ. 11 : ಸ್ವಾಮಿ ನಿತ್ಯಾನಂದ ತಮಿಳು ನಟಿ ರಂಜಿತಾಳೊಂದಿಗೆ ಶಯನಗೃಹದಲ್ಲಿರುವ ದೃಶ್ಯಗಳ ಪ್ರಸಾರಕ್ಕೆ ಹೈಕೋರ್ಟ್ ತಡೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಹಲವು ಖಾಸಗಿ ವಿದ್ಯುನ್ಮಾನ ಮಾಧ್ಯಮಗಳು, ಪ್ರಸಾರ ಭಾರತಿ, ಸರಕಾರ ಹಾಗೂ ನಗರ ಪೊಲೀಸ್ ಆಯುಕ್ತರು ಮಾರ್ಚ್ 17 ರಂದು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ವಿಭಾಗೀಯ ಪೀಠ ಸಮನ್ಸ್ ಜಾರಿ ಮಾಡಿದೆ. id="toptextpromo"> ನಿತ್ಯಾನಂದನ ಲೀಲೆಗಳನ್ನು ಪ್ರಸಾರ ಮಾಡದಂತೆ ಖಾಸಗಿ ದೃಶ್ಯ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಕೆ ಎಲ್ ಸುಬ್ಬಾರೆಡ್ಡಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗುರುವಾರ ವಿಚಾರಣೆ ನಡೆಸಿದ ನ್ಯಾ.ಗೋಪಾಲಗೌಡ, ನ್ಯಾ.ಬಿ ಎಸ್ ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಈ ತೀರ್ಪು ನೀಡಿದೆ. id='are-slot-1' class='oiad oi-axt oiadv'> id='top-searched-articles'> ನಿತ್ಯಾನಂದನ ರಾಸಲೀಲೆ ಪ್ರಕರಣ ಮಕ್ಕಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಹಸಿಬಿಸಿ ದೃಶ್ಯಗಳನ್ನು ವಿದ್ಯುನ್ಮಾನ ಮಾಧ್ಯಮಗಳು ನೇರವಾಗಿ ಪ್ರಸಾರ ಮಾಡುತ್ತಿದ್ದು, ಇದು ಸಾಮಾಜಿಕ ಒಳಿತಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.











Click it and Unblock the Notifications