ಸಾಧ್ವಿ ಪ್ರಜ್ಞಾ ಸಿಂಗ್ ಜಾಮೀನು ಅರ್ಜಿ ವಜಾ
ಮುಂಬೈ,
ಮಾ.12: 2008ರ ಮಾಲೆಂಗಾವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇಂದು ವಜಾಗೊಳಿಸಿದೆ. ಪ್ರಜ್ಞಾ ಸಿಂಗ್ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿ, ಆರೋಪ ಹೊರೆಸಲಾಗಿದೆ ಎಂದು ಸಾಧ್ವಿ ಪರ ವಕೀಲ ಮಹೇಶ್ ಜೇಠ್ಮಲಾನಿ ವಾದಿಸಿದರು. ಆದರೆ, ಜಾಮೀನು ಅರ್ಜಿ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಸ್ ಸಿ ಧರ್ಮಾಧಿಕಾರಿ ಅವರು ಎಟಿಎಸ್ ನ ಕ್ರಮಕ್ಕೆ ಸಮರ್ಥನೆ ನೀಡಿದರು. id="toptextpromo">2008
ರ ಅಕ್ಟೋಬರ್10 ರಂದು ಮಹಾರಾಷ್ಟ್ರದ ಉಗ್ರರ ನಿಗ್ರಹ ದಳ(ಏಟಿಎಸ್) ಸಾಧ್ವಿ ಪ್ರಜ್ಞಾ ಸಿಂಗ್ ರನ್ನು ಬಂಧಿಸಿತ್ತು. ಆದರೆ, ಕೋರ್ಟ್ ಗೆ ಪೊಲೀಸ್ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ಅಧಿಕೃತವಾಗಿ ಬಂಧನ ದಿನಾಂಕವನ್ನು ಅಕ್ಟೋಬರ್ 23 ಎಂದು ನಮೂದಿಸಲಾಗಿದೆ. ಮಾನವ ಹಕ್ಕುಗಳ ಆಯೋಗಕ್ಕೆ ಬಂಧನದ ಸಮಯದಲ್ಲಿ ಪೊಲೀಸರಿಂದ ಹಿಂಸೆಗೊಳಗಾದ ಬಗ್ಗೆ ಸಾಧ್ವಿ ಸಲ್ಲಿಸಿರುವ ಆರೋಪದ ಅರ್ಜಿಗೂ, ಕೋರ್ಟ್ ನಲ್ಲಿರುವ ಕೇಸ್ ಗೂ ಸರಿಯಾದ ಕೊಂಡಿ ಸಿಗದೇ ಕೋರ್ಟ್ ಸ್ಪಷ್ಟನೆ ಕೋರಿ ಜಾಮೀನು ನಿರಾಕರಿಸಿತು. id='are-slot-1' class='oiad oi-axt oiadv'> id='top-searched-articles'>ಸೆಪ್ಟೆಂಬರ್
29 ರಂದು ಮಾಲೇಗಾಂವ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 29 ಮಂದಿ ಮೃತಪಟ್ಟು, 100ಕ್ಕೂ ಅಧಿಕ ಜನ ಗಾಯಗೊಂಡಿರುವ ಘಟನೆ ನಡೆದಿತ್ತು. ಸೇನಾಧಿಕಾರಿ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಹಾಗೂ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ದಯಾನಂದ್ ಪಾಂಡೆ ಸೇರಿ ಒಟ್ಟು 11 ಮಂದಿಯ ವಿರುದ್ಧ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆ ಮೋಕಾ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.











Click it and Unblock the Notifications