ಬಿಡದಿ:ನಿತ್ಯಾನಂದ ಸ್ವಾಮೀಜಿ ಆಶ್ರಮ ಧ್ವಂಸ

ತಮಿಳುನಾಡು, ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಸ್ವಾಮೀಜಿಗೆ ಅಸಂಖ್ಯಾತ ಭಕ್ತರಿದ್ದಾರೆ. ತಿರುವಣ್ಣಾಮಲೈನಲ್ಲಿರುವ ಸ್ವಾಮೀಜಿಯ ಆಶ್ರಮಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕಳೆದ ರಾತ್ರಿ ಬೆಂಗಳೂರು ಸಮೀಪದ ಬಿಡದಿಯ ಆಶ್ರಮದಲ್ಲಿದ್ದ ಅನೇಕ ಭಕ್ತರು, ಪ್ರತಿಭಟನೆಯ ಭೀತಿಯಿಂದ ಆಶ್ರಮವನ್ನು ಖಾಲಿ ಮಾಡಿದ್ದಾರೆ. ಬಿಡದಿ ಆಶ್ರಮದಲ್ಲಿ ಅನೇಕಾನೇಕ ವಿದೇಶಿ ಭಕ್ತರುಗಳಿದ್ದರು ಎನ್ನಲಾಗಿದೆ.
ಕಿರಿಕಿರಿ:ನಟಿ ಜೊತೆ ನಿತ್ಯಾನಂದ ಸ್ವಾಮೀಜಿ ರಾಸಲೀಲೆ
ಇತ್ತೀಚಿನ ಬೆಳವಣಿಗೆಯಂತೆ ಬಿಡದಿಯ ಅಶ್ರಮದಲ್ಲಿ ಅಕ್ರಮವಾಗಿ ಪ್ರಾಣಿಗಳ ಚರ್ಮ ದಾಸ್ತಾನು ಇಟ್ಟಿರುವ ಶಂಕೆಯಿಂದ ಡಿಸಿಎಫ್ ಗೀತಾಂಜಲಿ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ರಾಸಲೀಲೆ ವಿಡಿಯೋ ಕುರಿತು ಈ ವರೆಗೂ ಸ್ವಾಮಿ ನಿತ್ಯಾನಂದ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.












Click it and Unblock the Notifications