ತೊಗಾಡಿಯಾ ಶಿವಮೊಗ್ಗ ಭೇಟಿಗೆ ಆಕ್ಷೇಪ
ಬೆಂಗಳೂರು,
ಮಾ. 2 : ಕೋಮು ಗಲಭೆಯಿಂದ ಬೆಂದಿರುವ ಶಿವಮೊಗ್ಗಕ್ಕೆ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಭೇಟಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇಂದು ವಿಧಾನ ಪರಿಷತ್ ನಲ್ಲಿ ತೀವ್ರ ಮಾತಿನ ಚಕಮಕಿ ನಡೆದು, ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ಪ್ರಸಂಗ ನಡೆಯಿತು. id="toptextpromo">ಪತ್ರಿಕೆಯೊಂದರಲ್ಲಿ
ಬಂದಿರುವ ಲೇಖನಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ, ಹಾಸನ, ದಾವಣಗೆರೆಯಲ್ಲಿ ಗುಂಪು ಘರ್ಷಣೆಗಳು ನಡೆದಿವೆ, ಅದರ ಕಾವು ಇನ್ನು ಕೂಡ ಮುಂದೆವರೆದಿದೆ. ಈ ನಗರಗಳಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಮುಖಂಡ ಪ್ರವೀಣ್ ತೊಗಾಡಿಯಾ ಶಿವಮೊಗ್ಗಕ್ಕೆ ಭೇಟಿ ನೀಡಿದರೆ, ಮತ್ತಷ್ಟು ಕೋಮುಗಲಭೆಗಳು ಹೆಚ್ಚಾಗಬಹುದು. ಆದ್ದರಿಂದ ತೊಗಾಡಿಯಾ ಅವರ ಭೇಟಿಯನ್ನು ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಟ್ಟುಹಿಡಿದವು. id='are-slot-1' class='oiad oi-axt oiadv'> id='top-searched-articles'>ಮಾರ್ಚ್
7 ರಂದು ಶಿವಮೊಗ್ಗದಲ್ಲಿ ಹಿಂದೂ ಸಮಾವೇಶ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಪಾಲ್ಗೊಳ್ಳುವುದು ಪೂರ್ವ ನಿಯೋಜಿತ ಕಾರ್ಯಕ್ರಮವಾಗಿದೆ. ಶಿವಮೊಗ್ಗ ಮತ್ತು ಹಾಸನದಲ್ಲಿ ನಡೆದ ಘಟನೆಗೂ, ತೊಗಾಡಿಯಾ ಭೇಟಿ ನೀಡುವುದಕ್ಕೂ ಸಂಬಂಧವಿಲ್ಲ. ಹಿಂದೂ ಸಮಾವೇಶದಿಂದ ಗಲಭೆಗಳು ನಡೆದಿರುವ ಉದಾಹರಣೆಗಳು ಎಂದು ಗೃಹ ಸಚಿವ ಆಚಾರ್ಯ ಸ್ಪಷ್ಟಪಡಿಸುತ್ತಿದ್ದಂತೆಯೇ ಜೆಡಿಎಸ್ ಮುಖಂಡ ಎಂ ಸಿ ನಾಣಯ್ಯ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ ಮಾಡಿದರು.











Click it and Unblock the Notifications