ಬಿಬಿಎಂಪಿ ಚುನಾವಣೆ : ಸರಕಾರಕ್ಕೆ ಕಪಾಳಮೋಕ್ಷ
ಬೆಂಗಳೂರು,
ಮಾ. 2 : ಪರೀಕ್ಷೆ ಕಾರಣ ನೀಡಿ ಬಿಬಿಎಂಪಿ ಚುನಾವಣೆ ನಡೆಸಲು ಕಾಲಾವಕಾಶ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಇದರಿಂದ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. id="toptextpromo">ಚುನಾವಣೆ
ನಡೆಸುವಂತೆ ಕೋರಿ ಮಾಜಿ ಮೇಯರ್ ಪಿ ರಮೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಹಾಗೂ ಕಾಲಾವಕಾಶ ಕೋರಿ ಸರಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೋಪಾಲಗೌಡ ಹಾಗೂ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರ ಪೀಠ ಈ ಆದೇಶ ನೀಡಿದೆ. ಮಾ.30ರೊಳಗೆ ಚುನಾವಣೆ ನಡೆಸಬೇಕು ಎಂದು ಫೆ 21 ರಂದು ಇದೇ ಪೀಠ ನೀಡಿದ್ದ ಆದೇಶವನ್ನು ತೀರ್ಪು ಎತ್ತಿ ಹಿಡಿದಿದೆ. ಈ ಸಂಬಂಧ ಹಲವು ಬಾರಿ ಸರಕಾರ ತರಾಟೆಗೆ ಒಳಗಾಗಿತ್ತು. id='are-slot-1' class='oiad oi-axt oiadv'> id='top-searched-articles'>ಚುನಾವಣೆ
ಸಂಬಂಧ ಹೈಕೋರ್ಟ್ ನ ತೀರ್ಪಿಗೆ ಸರಕಾರದ ನಿರ್ಲಕ್ಷ್ಯ ಮತ್ತು ನಡೆದುಕೊಂಡ ರೀತಿಗೆ ಪೀಠ ಛೀಮಾರಿ ಹಾಕಿದೆ. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೀಠ ತರಾಟೆಗೆ ತೆಗೆದುಕೊಂಡಿತು.











Click it and Unblock the Notifications