ಮಾರ್ಚ್ 4ರಂದು IE6 ಬ್ರೌಸರ್ ಶವ ಸಂಸ್ಕಾರ!

"ಗೂಗಲ್ ಹೆಡ್ ಕ್ವಾರ್ಟರ್ಸ್ ನಲ್ಲಿ ಆದ ಗಾಯದಿಂದ ಚೇತರಿಸಿಕೊಳ್ಳದೆ IE6 ಮಾರ್ಚ್ 1ರಂದು ಕೊನೆಯುಸಿರೆಳೆಯಿತು. ಮಾರ್ಚ್ 4ರಂದು ಅದರ ಶವಸಂಸ್ಕಾರ ಮಾಡಲಾಗುವುದು" ಎಂದು ಇದಕ್ಕಾಗಿಯೇ ರಚಿಸಲಾಗಿರುವ ವೆಬ್ ತಾಣದಲ್ಲಿ ಅಟೆನ್ ಡಿಸೈನ್ ಗ್ರೂಪ್ ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ಬಣ್ಣಿಸಿದೆ.
IE6 ಬ್ರೌಸರ್ ನ ಅಂತಿಮ ಸಂಸ್ಕಾರ ನಡೆಸುವುದು ನಿಜಕ್ಕೂ ತಮಾಷೆಯ ಸಂಗತಿ ಎಂದು ಅಟೆನ್ ಡಿಸೈನ್ ಕಂಪನಿಯ ಸ್ಥಾಪಕ ಮತ್ತು ಡೈರೆಕ್ಟರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಗೂಗಲ್ ಕಂಪನಿ ಕೂಡ ಮಾರ್ಚ್ 13ರಿಂದ IE6 ಬ್ರೌಸರ್ ಗೆ ಬೆಂಬಲ ನೀಡುವುದನ್ನು ನಿಲ್ಲಿಸುವುದಾಗಿ ಯುಟೂಬ್ ನಲ್ಲಿ ಪ್ರಕಟಿಸಿದೆ.
ಎಂಟೂವರ್ಷಗಳ ಕಾಲ ಇಂಟರ್ನೆಟ್ಟಿನಲ್ಲಿ ಮೆರೆದಾಡಿದ IE6 ಬ್ರೌಸರ್ ಇತ್ತೀಚಿನ ದಿನಗಳಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಈ ಬ್ರೌಸರಿಗಾಗಿಯೇ ವೆಬ್ ತಾಣವನ್ನು ನಿರ್ಮಿಸುವುದು ನೋವಿನ ಸಂಗತಿ ಮತ್ತು ಇದರಲ್ಲಿ ರಕ್ಷಣೆಗೆ ಸಂಬಂಧಿಸಿದಂತೆ ಅನೇಕ ಕೊರತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. IE8 ಆವೃತ್ತಿ ಬಂದನಂತರ IE6 ಜನಪ್ರಿಯತೆ ಮಂಕಾಗುತ್ತ ಬಂದಿತು.












Click it and Unblock the Notifications