44 ಡೀಮ್ಡ್ ವಿವಿಗಳಿಗೆ ನೋಟಿಸ್
ನವದೆಹಲಿ,
ಫೆ. 26 : ಡೀಮ್ಡ್ ವಿಶ್ವವಿದ್ಯಾಲಯ ಮಾನ್ಯತೆಯನ್ನು ಏಕೆ ರದ್ದುಗೊಳಿಸಬಾರದು ಎಂದು ಕಾರಣ ದೇಶಾದ್ಯಂತ ಇರುವ 44 ಡೀಮ್ಡ್ ವಿವಿಗಳಿಗೆ ನೋಟಿಸ್ ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. id="toptextpromo">ಯುಜಿಸಿ
ನೀಡಿದ ಸಲಹೆ ಹಾಗೂ ಸರಕಾರ ನಿಗದಿಪಡಿಸಿದ ಮಾನದಂಡವನ್ನು ಪಾಲಿಸುವಲ್ಲಿ ವಿಫಲವಾಗಿರುವ ಡೀಮ್ಡ್ ವಿವಿಗಳ ಮಾನ್ಯತೆಯನ್ನು ರದ್ದುಪಡಿಸುವ ಅಧಿಕಾರ ತನಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಕೋರ್ಟ್ ಗೆ ಸಲ್ಲಿಸಿದ ಹೆಚ್ಚುವರಿ ಅಫಿಡವಿಟ್ ನಲ್ಲಿ ಹೇಳಿದೆ. id='are-slot-1' class='oiad oi-axt oiadv'> id='top-searched-articles'>ಸರಕಾರ
ಹಾಗೂ ಯುಜಿಸಿ ನಿಗದಿಪಡಿಸಿದ ಮಾನದಂಡವನ್ನು ಪಾಲಿಸುವಲ್ಲಿ ವಿಫಲಗೊಂಡು ಪರಿಶೀಲನಾ ಸಮಿತಿಯಿಂದ ಡೀಮ್ಡ್ ಮಾನ್ಯತೆ ರದ್ದತಿ ಶಿಫಾರಸ್ಸಿಗೆ ಒಳಪಟ್ಟಿರುವ ಡೀಮ್ಡ್ ವಿವಿಗಳಿಗೆ ನೀಡಲಾಗಿರುವ ಡೀಮ್ಡ್ ಮಾನ್ಯತೆಯನ್ನು ಏಕೆ ರದ್ದುಗೊಳಿಸಬಾರದು ಎಂದು ನೋಟಿಸ್ ನೀಡುವ ಮೂಲಕ ಈ ಸಂಸ್ಥೆಗಳಿಗೆ ಮಾನ್ಯತೆ ಉಳಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಲಾಗಿದೆ ಎಂದು ಸರಕಾರ ಕೋರ್ಟ್ ಗೆ ತಿಳಿಸಿದೆ.











Click it and Unblock the Notifications