ಸಂಗೀತಾ ಮೊಬೈಲ್ ತೆಕ್ಕೆಗೆ ವೇವ್ ಟೆಲ್
ಬೆಂಗಳೂರು,
ಫೆ .24: ತಮಿಳುನಾಡು ಮೂಲದ ವೇವ್ ಟೆಲ್ ಮೊಬೈಲ್ಸ್ ಸಂಸ್ಥೆಯನ್ನು ಬೆಂಗಳೂರು ಮೂಲದ ಮೊಬೈಲ್ ಸಗಟು ಮಾರಾಟ ಮಳಿಗೆ ಸಂಗೀತಾ ಮೊಬೈಲ್ ಭಾರಿ ಮೊತ್ತ ಕೊಟ್ಟು ಖರೀದಿಸಿದೆ. ವೇವ್ ಟೆಲ್ ಖರೀದಿಗೆ ಸಂಗೀತಾ 13 ಕೋಟಿ ರು ತೆತ್ತಿದೆ. id="toptextpromo">ಕರ್ನಾಟಕ
ಸೇರಿದಂತೆ ಆಂಧ್ರಪ್ರದೇಶ ಹಾಗೂ ತಮಿಳು ನಾಡಿನಲ್ಲಿ ಸಂಗೀತಾ ಮೊಬೈಲ್ ನ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 500 ಕೋಟಿ ಆದಾಯ ನಿರೀಕ್ಷೆಯಿದೆ ಹಾಗೂ ಮುಂಬರುವ ಆರ್ಥಿಕ ವರ್ಷದಲ್ಲಿ ಸುಮಾರು 1 ಸಾವಿರ ಕೋಟಿ ರು ಆದಾಯ ಗಳಿಸುವ ಭರವಸೆಯಿದೆ ಎನ್ನುತ್ತಾರೆ ಸಂಗೀತಾ ಮೊಬೈಲ್ ನ ವ್ಯವಸ್ಥಾಪಕ ನಿರ್ದೇಶಕ ಎಲ್ ಸುಭಾಶ್ ಚಂದ್ರ. id='are-slot-1' class='oiad oi-axt oiadv'> id='top-searched-articles'>ಖರೀದಿ
ನಂತರನಂತರ ಬೆಳವಣಿಗೆಯಂತೆ ಸಂಗೀತಾ ಬ್ರಾಂಡ್ ನೇಮ್ ಅಡಿಯಲ್ಲಿ ತಮಿಳುನಾಡಿನ ಟೆಲಿಕಾಂ ಕ್ಷೇತ್ರದಲ್ಲಿ ಶೇ.30 ರಷ್ಟು ಸ್ವಾಮ್ಯವುಳ್ಳ ವೇವ್ ಟೆಲ್ ಮಳಿಗೆಗಳು 21 ರಿಂದ 100 ಮಳಿಗೆಗೆ ಏರಲಿದೆ.ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು ನೂರು ಕೋಟಿ ವ್ಯವಹಾರ ನಡೆಸಿದ್ದ ವೇವ್ ಟೆಲ್ ಮುಂಬರುವ ಆರ್ಥಿಕ ವರ್ಷಗಳಲ್ಲಿ 360 ಕೋಟಿ ರು ಗಳಿಸುವ ನಿರೀಕ್ಷೆ ಹೊಂದಿತ್ತು ಎಂದು ವೇವ್ ಟೆಲ್ ಮೊಬೈಲ್ಸ್ ನ ಸ್ಥಾಪಕ ಜಾನ್ ಯೇಸುದಾಸ್ ಹೇಳುತ್ತಾರೆ. ತಮಿಳುನಾಡು ವಿಭಾಗದಲ್ಲಿ ಜಾನ್ ಅವರೇ ಸಿಇಒ ಆಗಿ ಮುಂದುವರೆಯಲಿದ್ದಾರೆ ಎಂದು ಸಂಗೀತಾ ಮೊಬೈಲ್ಸ್ ನ ಪ್ರಕಟಣೆಯಲ್ಲಿ ಹೇಳಲಾಗಿದೆ.











Click it and Unblock the Notifications