ವಿರುಪಾಪುರಗಡ್ಡೆಯಲ್ಲಿ ಪುಣೆ ಸ್ಫೋಟದ ಉಗ್ರರು!

ಅಗತ್ಯ ಮಾಹಿತಿ ಮೇರೆಗೆ ಕೊಪ್ಪಳ ಜಿಲ್ಲೆಯ ವೀರಾಪುರ ಗಡ್ಡೆಗೆ ಆಗಮಿಸಿದ ಪುಣೆ ಪೊಲೀಸರ ತಂಡ ನಾಲ್ಕು ಜನರನ್ನು ವಶಕ್ಕೆ ತೆಗೆದುಕೊಂಡಿದೆ. ಈ ನಾಲ್ಕು ಕಾಶ್ಮೀರಿಗಳು ವೀರಾಪುರ ಗಡ್ಡೆಯಲ್ಲಿ ಕರಕುಶಲ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ತೊಡಗಿದ್ದರು. ಇನ್ನೂ ಮೂರು ಜನರು ಪುಣೆ ಸ್ಫೋಟ ಘಟನೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಸಂಶಯವಿದೆ. ಅವರ ಬಂಧನಕ್ಕೂ ಪೊಲೀಸರು ಜಾಲಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಶನಿವಾರ ನಡೆದ ಪುಣೆ ಸ್ಟೋಟದಲ್ಲಿ 11 ಮಂದಿ ಮೃತಪಟ್ಟಿದ್ದು, 45 ಮಂದಿ ಗಾಯಗೊಂಡಿದ್ದಾರೆ.












Click it and Unblock the Notifications